ಕುಂದಗೋಳ: ಕೃಷಿ ಇಲಾಖೆ ಕೈಗೊಳ್ಳುವ ರೈತರು ಬೆಳೆದ ಅತ್ಯುತ್ತಮ ಬೆಳೆಗೆ ಆಹ್ವಾನ ನೀಡಿರುವ ಅರ್ಜಿ ಬಳಿಕ ರೈತನ ಬೆಳೆ ಆಯ್ಕೆಯಾದಲ್ಲಿ ಹಣದ ಬದಲಾಗಿ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಎಂಬ ಒತ್ತಾಯ ರೈತ ವಲಯದಲ್ಲಿ ಕೇಳಿ ಬಂದಿದೆ.
ಈಗಾಗಲೇ ಕೃಷಿ ಇಲಾಖೆ 2024-25ನೇ ಸಾಲಿನ ಹಿಂಗಾರು ಹಂಗಾಮಿನ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲಿ ನಿಗದಿ ಪಡಿಸಿದ ವಿವಿಧ ಬೆಳೆ ಸ್ಪರ್ಧೆಗೆ ಆಹ್ವಾನ ನೀಡಿದೆ. ಅದರಂತೆ ಸ್ಥಳೀಯ ಕೃಷಿ ಇಲಾಖೆ ಅಧೀನದ ಇಲಾಖೆಗಳಿಗೆ ಅರ್ಜಿ ಸಲ್ಲಿಸಲು ಬಂದಂತಹ ರೈತರು ಈ ಹಿಂದೆ ನಮ್ಮ ಬೆಳೆ ಆಯ್ಕೆಯಾದಾಗ ಕೇವಲ ಹಣ ಮಾತ್ರ ನೀಡಿದ್ದಾರೆ. ಅದರ ಬದಲಾಗಿ ಪ್ರಶಸ್ತಿ, ಪ್ರಮಾಣ ಪತ್ರ, ಸನ್ಮಾನ ಮತ್ತು ರೈತಾಪಿ ಜನರ ಸಾಧನೆ ಹಂಚಿಕೊಳ್ಳಲು ವೇದಿಕೆ ಕಲ್ಪಿಸಬೇಕು ಎಂದಿದ್ದಾರೆ.
ಪ್ರಸ್ತುತ ವರ್ಷ 2024-25ನೇ ಸಾಲಿನ ಬೆಳೆ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ವರ್ಷ ಆದರೂ ಆಯ್ಕೆಯಾದ ರೈತರಿಗೆ ಹಣದ ಬದಲಾಗಿ ಪ್ರಶಸ್ತಿ, ಪ್ರಮಾಣ ಪತ್ರ, ವೇದಿಕೆ, ಸನ್ಮಾನ ಕಲ್ಪಿಸಿ ಎಂದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/11/2024 10:43 pm