ಕುಂದಗೋಳ : ಅಲ್ಲಾಪೂರ ಗುಡೇನಕಟ್ಟಿ ಸಂಶಿ ಹಳ್ಳಕ್ಕೆ ಅಡ್ಡವಾಗಿ ನಿರ್ಮಿಸಿದ ಸೇತುವೆ ಏನಾಯ್ತು? ಸ್ಥಳದಲ್ಲಿ ಇದ್ದ ಪೈಪ್ ಏನಾದವು? ಚಕ್ಕಡಿ ಎತ್ತು ಟ್ರ್ಯಾಕ್ಟರ್ ಓಡಾಟಕ್ಕೆ ದಾರಿ ಯಾವುದಯ್ಯ ಎಂದು ರೈತರು ಜಿಲ್ಲಾ ಪಂಚಾಯತ್ ಪಂಚಾಯತ್ ರಾಜ್ ಇಲಾಖೆಗೆ ಪ್ರಶ್ನೆ ಕೇಳಿದ್ದಾರೆ.
ಹೌದು ! 2022-23 ನೇ ಸಾಲಿನಲ್ಲಿ ಕುಂದಗೋಳ ತಾಲೂಕಿನ ಜಿಲ್ಲಾ ಪಂಚಾಯತ್ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಗುಡೇನಕಟ್ಟಿ ಅಲ್ಲಾಪೂರ ಮಾರ್ಗ ಮಧ್ಯದ ಸಂಶಿ ಹಳ್ಳಕ್ಕೆ ಅಡ್ಡವಾಗಿ ಸಿಡಿ ನಿರ್ಮಾಣ ಮಾಡಲು 9.50 ಲಕ್ಷ ಹಣ ಮಂಜೂರು ಆಗಿ ಕಾಮಗಾರಿ ಸಹ ನಡೆದಿತ್ತು.
ಆದಾದ ಕೆಲವೇ ದಿನಗಳಲ್ಲಿ ಸ್ಪಷ್ಟ ಕಾರಣ ಇಲ್ಲದೆ ಕಾಮಗಾರಿಯನ್ನು ನಾಶ ಮಾಡಲಾಗಿತ್ತು. ಇದೀಗ ಈ ವಿಷಯವೇ ರೈತಾಪಿ ವಲಯದಲ್ಲಿ ಕೆಂಗಣ್ಣಿಗೆ ಗುರಿಯಾಗಿ ಬ್ರಿಡ್ಜ್ ಪುನಃ ನಿರ್ಮಾಣ ಮಾಡದಿದ್ದರೆ ಉಗ್ರ ಹೋರಾಟ ಎಚ್ಚರಿಕೆ ನೀಡಿದ್ದಾರೆ.
ಸದ್ಯ ನಾಶ ಮಾಡಲಾದ ಸಿಡಿ ನಿರ್ಮಾಣ ಕಾಮಗಾರಿ ಮೇಲೆ ರೈತಾಪಿ ಜನರು, ಟ್ರ್ಯಾಕ್ಟರ್, ಎತ್ತು, ಚಕ್ಕಡಿ ಓಡಾಟ ಕಷ್ಟವಾಗಿ ಪಲ್ಟಿಯಾಗಿ ಬಿದ್ದಿದ್ದಾರೆ.
ಮುಖ್ಯವಾಗಿ ಈ ರಸ್ತೆ ಮಾರ್ಗವಾಗಿ 10.000 ಹೇಕ್ಟರ್ ಕೃಷಿ ಭೂಮಿ ಇದ್ದು, ರೈತಾಪಿ ಜನರಿಗೆ ಬ್ರಿಡ್ಜ್ ಅವಶ್ಯಕತೆ ಇದ್ದರೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಈ ವಿಷಯಕ್ಕೆ ಪ್ರತಿಕ್ರಯಿಸಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.
ಆದರೆ, ರೈತಾಪಿ ಜನರು ಮಾತ್ರ ಸಂಪೂರ್ಣ ಅಭಿವೃದ್ಧಿ ಮಾಡಿ, 9.50 ಲಕ್ಷ ಹಣದ ವಿವರ ಕೊಡಿ ಎನ್ನುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಿಸಿ ಅನ್ನದಾತನ ಕಷ್ಟಕ್ಕೆ ಆತನ ಹೊಲದ ದಾರಿಗೆ ಧ್ವನಿಯಾಗಬೇಕಿದೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
29/11/2024 05:33 pm