ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ನನಗೊಂದು ಬೇಕು ಕೃಷಿಹೊಂಡ; ಹೆಚ್ಚಲಿದೆ ಆದಾಯದ ಆನಂದ

ನವಲಗುಂದ: ಇದು ಕೃಷಿ ಕ್ರಾಂತಿಯೋ, ಕೃಷಿಕರಿಗೆ ಲಾಭವೋ, ಬೆಳೆಗಳಿಗೆ ನೆರವಾದ ವರವೋ, ಅನ್ನದಾತನ ಶ್ರಮವೋ ತಿಳಿಯದು. ಆದ್ರೇ, ಕೃಷಿಹೊಂಡ ಮಾತ್ರ ಎಲ್ಲ ರೈತರ ಬಾಳನ್ನು ಬೆಳಗಿ ಹೊಸ ಆದಾಯದ ಸೆಲೆಯನ್ನು ಮಣ್ಣಿನ ಮಕ್ಕಳಿಗೆ ಪರಿಚಯಿಸಿದೆ.

ದೇಶಪಾಂಡೆ ಫೌಂಡೇಶನ್ ನೆರವು ಪಡೆದು ತಮ್ಮ ತಮ್ಮ ಜಮೀನಲ್ಲಿ ನವಲಗುಂದ ತಾಲೂಕಿನ ಬೆಳವಟಿಗಿ ಗ್ರಾಮದಲ್ಲಿ ರೈತ ಸಮೂಹವೇ ಕೃಷಿಹೊಂಡ ನಿರ್ಮಾಣ ಮಾಡಿಕೊಂಡು ಆದಾಯದಲ್ಲಿ ಏರಿಕೆ, ಬೆಳೆಯಲ್ಲಿ ಬದಲಾವಣೆ, ತೋಟಗಾರಿಕೆ ಬೆಳೆಯಲ್ಲಿ ಯಶಸ್ಸು, ತರಕಾರಿ ಬೆಳೆಯಲ್ಲಿ ಅಧಿಕ ಲಾಭ ಪಡೆದಿದ್ದು ಇದೀಗ ಇಂತಹ ಕೃಷಿಹೊಂಡ ನಮಗೂ ಕೊಡಿ ಎಂದು ಇಲ್ಲೊಬ್ಬ ರೈತರು ಮುಂದೆ ಬಂದಿದ್ದಾರೆ.

ಅವರೇ ನವಲಗುಂದ ತಾಲೂಕಿನ ಇದೇ ಬೆಳವಟಿಗಿ ಗ್ರಾಮದ ಶೇಖಪ್ಪ ನಿಂಗಪ್ಪ ಗಾಣಿಗೇರ. ತಮ್ಮ ನಾಲ್ಕು ಎಕರೆ ಜಮೀನಿಗೆ ನೆರವಾಗಲು ಕೃಷಿಹೊಂಡ ಕೊಡಿ ಎನ್ನುವ ಅವರು, ಅದರಿಂದಾಗುವ ಪ್ರಯೋಜನ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಪ್ರತಿನಿಧಿ ನಡೆಸಿದ ಚಿಟ್ ಚಾಟ್ ಇಲ್ಲಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/07/2022 03:04 pm

Cinque Terre

78.04 K

Cinque Terre

1

ಸಂಬಂಧಿತ ಸುದ್ದಿ