ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ನರ್ಸರಿ ಉದ್ಘಾಟಿಸಿದ ಜಿ.ಪಂ ಸಿ ಇ ಓ ಇಟ್ನಾಳ

ನವಲಗುಂದ : ಧಾರವಾಡ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುರೇಶ್ ಇಟ್ನಾಳರವರಿಂದ ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮ ಪಂಚಾಯಿತಿಯಲ್ಲಿ ಸರಸ್ವತಿ ಮಹಿಳಾ ಸಂಘದಿಂದ ನಿರ್ವಹಣೆ ಮಾಡಲ್ಪಡುವ ನರ್ಸರಿಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸುರೇಶ್ ಇಟ್ನಾಳ, ಸದರಿ ನರ್ಸರಿಯ ಸದುಪಯೋಗ ಪಡಿಸಿಕೊಂಡು ಜೀವನ ಮಟ್ಟವನ್ನು ಉತ್ತಮವಾಗಿಸಿಕೊಳ್ಳಲು ಮಹಿಳೆಯರಿಗೆ ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಬಿ.ಎಸ್. ಮೂಗನೂರಮಠ ಮತ್ತು ನವಲಗುಂದ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಎಂ. ಕಾಂಬಳೆ ಮತ್ತು ಸುಭಾಷಗೌಡ್ರ ಪಾಟೀಲ, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಶ್ರೀಶಕ್ತಿ ಸಂಘದ ಅಧ್ಯಕ್ಷರು ಸದಸ್ಯರುಗಳು ಪಿಡಿಒ ಗ್ರಾಪಂ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿ ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

02/07/2022 02:55 pm

Cinque Terre

19.81 K

Cinque Terre

0

ಸಂಬಂಧಿತ ಸುದ್ದಿ