ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದ ರೈತರ ಜಮೀನಿನಲ್ಲಿ ಮುಂಗಾರು ಹಂಗಾಮಿನ ರೈತರ ಬೆಳೆ ಸಮೀಕ್ಷೆ ಅಪ್ಲೋಡ್ ಮಾಡಿ ಜಮೀನಿನ ಅಳತೆ ಜಿ.ಪಿ.ಎಸ್ ಮಾಡುವ ಮಾಹಿತಿಯನ್ನು ತಾಲೂಕು ಸಹಾಯಕ ಕೃಷಿ ಅಧಿಕಾರಿ ಅಂಬಿಕಾ ಮಹೇಂದ್ರಕರ್ ರೈತರಿಗೆ ಮಾಹಿತಿ ನೀಡಿದರು.
ಹೌದು ! ರೈತರ ಜಮೀನಿಗೆ ಭೇಟಿ ನೀಡಿದ ಸಹಾಯಕ ಕೃಷಿ ಅಧಿಕಾರಿ ಅಂಬಿಕಾ ಸ್ವತಃ ರೈತರೇ ತಾವೇ ತಮ್ಮ ಮೊಬೈಲ್ ಬೆಳೆ ಸಮೀಕ್ಷೆ ತಂತ್ರಾಂಶ ಡೌನ್ಲೋಡ್ ಮಾಡಿ ಬೆಳೆಯ ಪೋಟೋ ತೆಗೆದು ಅಪ್ಲೋಡ್ ಮಾಡುವ ಕುರಿತು ವಿವರವಾಗಿ ರೈತರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪರಶುರಾಮ ಹೊಸಳ್ಳಿ, ಬಸವರಾಜ ಯೋಗಪ್ಪನವರ, ಗುರುಪಾದಪ್ಪ ಹೊಸಳ್ಳಿ, ಚಿದಾನಂದ ಕುಸುಗಲ್, ಸಕ್ರಪ್ಪ ಕಮ್ಮಾರ, ಮಾಂತೇಶ್ ಕೆಂಚಣ್ಣನವರ, ದೇವಿಂದ್ರಪ್ಪ ಬೆಳ್ಳಟ್ಟಿ, ಬಾಹುಬಲಿ ಮಲ್ಲಿಗವಾಡ ಹಾಗೂ ಇತರೆ ರೈತರು ಈ ಸಂದರ್ಭದಲ್ಲಿ ಮಾಹಿತಿ ಪಡೆದುಕೊಂಡರು.
Kshetra Samachara
30/06/2022 01:19 pm