ನವಲಗುಂದ: ನಾಲ್ಕು ಅಕ್ಷರ ಕಲಿತು ಪದವಿ ಪ್ರಮಾಣ ಪತ್ರ ಕೈಯಲ್ಲಿ ಹಿಡಿದು ನಗರ ಸೇರಿ ಉದ್ಯೋಗ ಅರಸುವವರ ನಡುವೆ ಇಲ್ಲೊಬ್ಬ ಪದವೀಧರ ಹಳ್ಳಿಯಲ್ಲೇ ಕೃಷಿ ಕೈಗೊಂಡು ವಾರ್ಷಿಕ 5 ಲಕ್ಷ ರೂ. ಆದಾಯ ಗಳಿಸಿದ್ದಾರೆ.
ಹೌದು. ನವಲಗುಂದ ತಾಲೂಕಿನ ಅಮರಗೋಳದ ರೈತ ರುದ್ರಗೌಡ ಮುನೇನಕೊಪ್ಪ ಓದಿದ್ದು ಪದವಿಯಾದ್ರೂ ಕೃಷಿಯನ್ನೇ ನಂಬಿ ಆ ಕೃಷಿಗೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಿಸಿಕೊಂಡು ತೋಟಗಾರಿಕೆ, ತರಕಾರಿ ವಾಣಿಜ್ಯ ಬೆಳೆ ಯಶಸ್ಸಿನ ಇಂದಿನ ದೇಶ್ ಕೃಷಿ ನಾಯಕರಾಗಿದ್ದಾರೆ. ತಮ್ಮ 8 ಎಕರೆ ಜಮೀನಿಗೆ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ರೈತ ರುದ್ರಗೌಡ ತೋಟಗಾರಿಕೆ ಬೆಳೆ ಪೇರಲ್, ಸೇವಂತಿ, ಜೊತೆ ವಾಣಿಜ್ಯ ಬೆಳೆ ಗೋವಿನಜೋಳ, ಹೆಸರು, ಹತ್ತಿ, ಜೋಳ, ಕಡಲೆ, ಬೆಳೆದು ಬೆಲೆ ಪಡೆದವರು.
ನವಲಗುಂದ ತಾಲೂಕಿನಲ್ಲಿ ಎಲ್ಲ ರೈತರಿಗೂ ನೆರವಾಗುವ ನಿಟ್ಟಿನಲ್ಲಿ ಕೃಷಿಹೊಂಡದ ಕೊಡುಗೆ ನೀಡಿದ ದೇಶಪಾಂಡೆ ಫೌಂಡೇಶನ್ ಬೀಜೋಪಚಾರ, ಗೊಬ್ಬರ, ಕೀಟನಾಶಕ ಸೇರಿದಂತೆ ಸರ್ವ ವಿಧದಲ್ಲೂ ಬೇಸಾಯಕ್ಕೆ ಬೆಂಬಲ ನೀಡಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/06/2022 09:36 pm