ನವಲಗುಂದ : ಒಬ್ಬ ರೈತನ ಸಾಧನೆ, ಆ ಸಾಧನೆಗೆ ವರವಾದ ಕೃಷಿಹೊಂಡದ ಯಶೋಗಾಥೆ ಅದೆಷ್ಟೋ ರೈತರಿಗೆ ಮಾದರಿಯಾಗಿ ಎಲ್ಲರೂ ಕೃಷಿಹೊಂಡದ ಬೇಸಾಯ ಕೈಗೊಳ್ಳಲು ಪ್ರೇರಣೆ ನೀಡಿ ಲಕ್ಷ ಲಕ್ಷ ಆದಾಯದ ಖುಷಿ ಕೊಟ್ಟಿದೆ.
ಈ ಸಾಲಿನಲ್ಲಿ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಉತ್ಸಾಹಿ ರೈತ ಮುತ್ತಪ್ಪ ಹಣುಮಂತಪ್ಪ ಹೆಬ್ಬಳ್ಳಿ ಒಬ್ಬರಾಗಿ ತಮ್ಮ ಕೃಷಿ ಸಾಧನೆಯಿಂದಲೇ ಇಂದಿನ ದೇಶ್ ಕೃಷಿ ಸಂಚಿಕೆಯ ಸಾಧಕರಾಗಿದ್ದಾರೆ.
ತಮ್ಮ 5 ಎಕರೆ ಜಮೀನಿಗೆ ಆಶ್ರಯವಾಗಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 100/100 ಕೃಷಿಹೊಂಡ ನಿರ್ಮಿಸಿಕೊಂಡ ರೈತ ಮುತ್ತಪ್ಪ ಕಡಿಮೆ ಜಮೀನಿನಲ್ಲೂ ಕೃಷಿಹೊಂಡದ ಮೂಲಕ ಹೆಚ್ಚಿನ ಆದಾಯ ಅಂದ್ರೇ ವಾರ್ಷಿಕ 3.75 ಲಕ್ಷ ಆದಾಯ ಶ್ರಮದ ಕಾಯಕದಿಂದ ಸವಿದಿದ್ದಾರೆ.
ಕಡಿಮೆ ಜಮೀನು ಹೊಂದಿದವರು ನಿರಾಕರಿಸುತ್ತಿದ್ದ ಕೃಷಿಹೊಂಡ ಇದ್ದಷ್ಟು ಜಮೀನಿನಲ್ಲೇ ತೋಟಗಾರಿಕೆ, ತರಕಾರಿ ಬೆಳೆಗೆ ಹರಿಸಿದ ಜಲಧಾರೆಯ ಬೆಳೆ, ಆ ಬೆಳೆಯ ಲಾಭ ಎಲ್ಲರನ್ನೂ ಕೃಷಿಹೊಂಡದ ಕೃಷಿಯತ್ತ ಆಕರ್ಷಿಸಿದೆ.
ಒಟ್ಟಾರೆ ದೇಶಪಾಂಡೆ ಫೌಂಡೇಶನ್ ರೈತ ಕುಲದ ಏಳ್ಗೆಗಾಗಿ ವಾಣಿಜ್ಯ ಬೆಳೆ, ತೋಟಗಾರಿಕೆ ಬೆಳೆ, ತರಕಾರಿಗೂ ಸಹಕಾರಿಯಾಗಿ ಮಳೆ ಅಭಾವದ ನಡುವೆಯೂ ಬೆಳೆ ಬೆಳೆಯಲು ಛಲ ಬಲ ಎರಡನ್ನು ತುಂಬಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/06/2022 09:59 am