ನವಲಗುಂದ: ಮೇಟಿ ವಿದ್ಯೆ ಎಂಬುದು ಪುಸ್ತಕದಿಂದ ಬಂದಿದ್ದಲ್ಲ. ಅದು ದುಡಿಮೆಯ ಅನುಭವದಿಂದ ಬಂದಿದ್ದು. ಇದೇ ಕಾರಣಕ್ಕಾಗಿ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂದು ಹಿರಿಯರು ಹೇಳಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಹಿತಗಾಳಿಗೆ ಮೈಒಡ್ಡಿ ದುಡಿಯುವ ಅನ್ನದಾತರೇ ನಿಜಸುಖಿಗಳು.
ಇವತ್ತಿನ ದೇಶ್ ಕೃಷಿ ಸಂಚಿಕೆಯಲ್ಲಿ ನವಲಗುಂದ ತಾಲೂಕು ಕಡದಳ್ಳಿ ಗ್ರಾಮದ ಯುವ ರೈತ ಈರಯ್ಯ ಬಸಯ್ಯ ಹಿರೇಮಠ ಅವರು ತಮ್ಮ ಅನುಭವದ ಮಾತು ಹೇಳಿದ್ದಾರೆ. ಬಿಕಾಂ ಪದವೀಧರನಾದ ಈರಯ್ಯ ಕುಲ ಕಸಬು ಕೃಷಿಯನ್ನು ಬಿಟ್ಟಿಲ್ಲ. ಸಹಜ ಸುಸ್ಥಿರ ಕೃಷಿ ಮಾಡುತ್ತಿರುವ ಈರಯ್ಯ ಅವರೊಂದಿಗೆ ನಮ್ಮ ಪ್ರತಿನಿಧಿ ನಾಗರಾಜ್ ನಡೆಸಿರುವ ಕಿರುಸಂದರ್ಶನ ಇಲ್ಲಿದೆ ನೋಡೋಣ ಬನ್ನಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/06/2022 06:12 pm