ನವಲಗುಂದ : ರಾಯಚೂರಿನಲ್ಲಿ 3 ನೇ ರಾಜ್ಯ ಸಮ್ಮೇಳನ ಜರುಗಲಿದ್ದು, ಕರ್ನಾಟಕ ಜನಶಕ್ತಿಯಿಂದ ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿಯವರು ಮಹದಾಯಿ ಹೋರಾಟಗಾರರು ಆಗಮಿಸಿ ಬೆಂಬಲ ನೀಡಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ಕರಪತ್ರ ನೀಡುವ ಮೂಲಕ ಆಹ್ವಾನಿಸಿದರು.
ಈ ಸಂಧರ್ಭದಲ್ಲಿ ರೈತರಾದ ಸಿದ್ದಪ್ಪ ಮುಪ್ಪಯ್ಯನವರ, ಯಲ್ಲಪ್ಪ ದಾಡಿಬಾವಿ, ನಿಂಗಪ್ಪ ತೋಟದ, ಜಿ.ಕೆ.ಮೊರಬದ, ಬಸನಗೌಡ ಮೊರಬದ, ಯಲ್ಲಪ್ಪ ಹೊನ್ನಳ್ಳಿ, ಬಸವರಾಜ ಬಳ್ಳೂಳ್ಳಿ, ಮುರೆಗೆಪ್ಪ ಪಲ್ಲೇದ, ಶಂಕರು ಸಂಗಟಿ, ಕರ್ನಾಟಕ ಜನಶಕ್ತಿಯ ಶರಣಪ್ಪ ದೊಡಮನಿ, ಚುಳಚಪ್ಪ ಮಾದರ, ಮುತ್ತಣ್ಣ ಮಾದರ ಸೇರಿದಂತೆ ಹಲವರು ಇದ್ದರು.
Kshetra Samachara
16/06/2022 05:54 pm