ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ರೈತರ ಜಮೀನುಗಳಲ್ಲಿ ಚಿಗರಿ ಹಾವಳಿ, ಬೇಸತ್ತ ಅನ್ನದಾತ

ಅಣ್ಣಿಗೇರಿ: ರೈತ ಕಷ್ಟಪಟ್ಟು ಸಾಲ ಸೂಲ ಮಾಡಿ ಜಮೀನುಗಳನ್ನು ಹದಮಾಡಿ ಬಿತ್ತನೆ ಕಾರ್ಯ ಮಾಡಿತ್ತಿದ್ದಾನೆ. ಇದರ ಮಧ್ಯೆ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಬಿತ್ತನೆ ಕಾರ್ಯ ಈಗಾಗಲೇ ಬಹುತೇಕ ಪ್ರಾರಂಭಗೊಂಡಿದೆ.

ಆದರೆ ರೈತ ಬಿತ್ತನೆ ಮಾಡಿದ ಜಮೀನುಗಳಲ್ಲಿ ಚಿಗರಿ ಮತ್ತು ಸಾರಂಗಗಳ ಹಾವಳಿ ಹೆಚ್ಚಾಗಿದೆ. ಬಿತ್ತನೆ ಮಾಡಿದ ಕಾಳುಗಳನ್ನು ಮತ್ತು ಬೆಳೆಯುತ್ತಿರುವ ಸಸಿಗಳನ್ನು ಚಿಗರಿ ಮತ್ತು ಸಾರಂಗಗಳು ತಿನ್ನುತ್ತಿವೆ. ಇದರಿಂದಾಗಿ ರೈತ ಕಂಗಾಲಾಗಿದ್ದಾನೆ. ಮೊದಲೇ ಸಾಲ ಮಾಡಿ ಬಿತ್ತನೆ ಕಾರ್ಯಗಳನ್ನು ಮುಗಿಸಿದ ಅನ್ನದಾತನಿಗೆ ಚಿಗರಿಗಳು ಮತ್ತು ಸಾರಂಗಗಳ ಹಾವಳಿ ಕಿರಿಕಿರಿ ಮಾಡುತ್ತಿದೆ.

ಕಳೆದ ವರ್ಷ ತಾಲೂಕು ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಯವರಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ, ಹಾಗೂ ಅರಣ್ಯ ಇಲಾಖೆಗೆ ರೈತಪರ ಸಂಘಟನೆಗಳು, ಮಾಜಿ ಶಾಸಕರು, ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಈ ವರ್ಷವಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರೈತರಿಗೆ ಆಗುತ್ತಿರುವ ಚಿಗರಿಗಳ ಹಾವಳಿ ಗಳಿಂದ ಮುಕ್ತಿ ಸಿಗುವಂತೆ ಮಾಡುತ್ತಾರಾ ಎಂಬುದು ಕಾದು ನೋಡಬೇಕಾಗಿದೆ.

-ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ

Edited By : Shivu K
Kshetra Samachara

Kshetra Samachara

08/06/2022 11:12 am

Cinque Terre

33.37 K

Cinque Terre

0

ಸಂಬಂಧಿತ ಸುದ್ದಿ