ಅಣ್ಣಿಗೇರಿ: ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಈಗಾಗಲೇ ತಾಲೂಕಿನಾದ್ಯಂತ ಪ್ರಾರಂಭಗೊಂಡಿದ್ದು,ಇದಕ್ಕೆ ಸಹಕಾರಿಯಂತೆ ಮುಂಗಾರು ಮಳೆ ಸಹ ಪ್ರಾರಂಭವಾಗಿ ರೈತನ ಮುಖದಲ್ಲಿ ಮತ್ತಷ್ಟು ನಗು ಕಾಣುತ್ತಿದೆ.
ಪಟ್ಟಣ ಸೇರಿದಂತೆ ಜಿಲ್ಲೆಯಾದ್ಯಂತ ನಿನ್ನೆ ಮೊನ್ನೆ ಸುರಿದ ಮಳೆಯಿಂದಾಗಿ ಮುಂಗಾರು ಬಿತ್ತನೆ ಮಾಡಲು ರೈತ ಕುಲಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ಈ ಹಿನ್ನೆಲೆ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳು ಪಟ್ಟಣಕ್ಕೆ ಬಂದು ಶೇಂಗಾ ಬೀಜವನ್ನು ಮಾಡುವ ಯಂತ್ರಗಳಿಗೆ ಮೊರೆಹೋಗಿದ್ದಾರೆ. ಈಗಾಗಲೇ ರೈತರು ಹೆಸರು, ಬಿಟಿ ಹತ್ತಿಯನ್ನು ಬಿತ್ತನೆ ಮಾಡಲು ಪ್ರಾರಂಭಿಸಿದ್ದಾರೆ. ಸ್ವಲ್ಪ ದಿನಗಳ ನಂತರ ಶೇಂಗಾ ಬಿತ್ತನೆ ಕಾರ್ಯ ಪ್ರಾರಂಭಗೊಳ್ಳಲಿದೆ. ಈಗಾಗಲೇ ರೈತರು ಶೇಂಗಾ ಬೀಜಗಳನ್ನು ತಯಾರಿ ಮಾಡಿಕೊಂಡು ಬೀಜೋಪಚಾರ ಮಾಡಿ ಬಿತ್ತಲು ಸಜ್ಜಾಗುತ್ತಿದ್ದಾರೆ.
ಈ ವರ್ಷ ವರುಣದೇವ ರೈತರಿಗೆ ಸಮೃದ್ಧಿಯಾಗಿ ಮಳೆ ನೀಡಿ ರೈತರ ಕಷ್ಟಗಳು ದೂರವಾಗಲಿ ಎಂದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಶುಭ ಹಾರೈಸುತ್ತದೆ.
ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
04/06/2022 01:32 pm