ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ರೈತರ ಕೈ ಹಿಡಿದ ಕೃಷಿಹೊಂಡ, ಪರ್ಯಾಯ ಬೆಳೆಗೆ ಅನುಕೂಲ

ನವಲಗುಂದ : "ಆಗದು ಎಂದೂ ಕೈಲಾಗದು ಎಂದು ಕೈ ಕಟ್ಟಿ ಕುಳಿತರೇ ಸಾಗದು ಕೆಲಸವೂ ಮುಂದೆ ಸಾಗದು ಕೆಲಸವೂ ಮುಂದೆ "ಎಂಬ ಬಂಗಾರದ ಮನುಷ್ಯ ಚಿತ್ರದ ಡಾ.ರಾಜಕುಮಾರ್ ಹಾಡಿನಂತೆ ಇಲ್ಲೊಬ್ಬ ರೈತ ಒಣ ಬೇಸಾಯದ ಮಾರ್ಗದ ಜೊತೆ ಕೃಷಿಹೊಂಡ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ನವಲಗುಂದ ತಾಲೂಕಿನ ಮೊರಬ ಗ್ರಾಮದ ರೈತ ಶಿವಪ್ಪ ತಳವಾರ ಎಂಬುವವರು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ನೂತನ ಕೃಷಿಹೊಂಡ ನಿರ್ಮಿಸಿಕೊಂಡು ರೇಷ್ಮೆ, ತೆಂಗು, ತರಕಾರಿ ಬೆಳೆಯಲು ಇಚ್ಚಿಸಿ ಈಗಾಗಲೇ ಬಿರು ಬಿಸಿಲನ್ನು, ಮಳೆಯನ್ನು ಲೆಕ್ಕಿಸದೆ ಕೃಷಿಹೊಂಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.

ಒಟ್ಟು 14 ಎಕರೆ ಕೃಷಿ ಭೂಮಿ ಹೊಂದಿದ ರೈತ ಶಿವಪ್ಪ ತಳವಾರ 100/100 ಸುತ್ತಳತೆ ಕೃಷಿಹೊಂಡಕ್ಕೆ ಮನಸ್ಸು ಮಾಡಿ ಒಣ ಬೇಸಾಯದ ಮಾರ್ಗಕ್ಕಿಂತ ಅನ್ನದಾತನ ಕೈ ಹಿಡಿಯಬಲ್ಲ, ಹೆಚ್ಚಿನ ಆದಾಯದ ಮಾರ್ಗ ತೋರಬಲ್ಲ ಕೃಷಿಹೊಂಡ ಲೇಸು ಎನ್ನುತ್ತಿದ್ದಾರೆ.

ಈ ಮೊದಲು ಒಣ ಬೇಸಾಯದ ಮಾರ್ಗದ ಮೂಲಕ ಹತ್ತಿ, ಹೆಸರು, ಗೋವಿನ ಜೋಳಕ್ಕೆ ತೃಪ್ತಿ ಪಟ್ಟಿದ್ದ ರೈತರಿಗೆ ಕೃಷಿಹೊಂಡ ಹೊಸ ಅವಕಾಶ ನೀಡಿದೆ. ತೆಂಗು, ರೇಷ್ಮೆ, ತರಕಾರಿಯಂತಹ ವಾಣಿಜ್ಯ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಿದ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಕಾರ್ಯ ರೈತರನ್ನು ಹಸನ್ಮುಖಿ ಮಾಡಿದೆ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/04/2022 06:55 pm

Cinque Terre

156.15 K

Cinque Terre

0

ಸಂಬಂಧಿತ ಸುದ್ದಿ