ಧಾರವಾಡ : ಕೃಷಿಯಲ್ಲಿ ತೋಟಗಾರಿಕೆ ಬೆಳೆ ತರಕಾರಿ, ವಾಣಿಜ್ಯ ಬೆಳೆ ಹೂಗಳನ್ನು ಬೆಳೆಯಲು ಅನುಕೂಲವಾಗಲೆಂದು ಇಲ್ಲೊಬ್ಬ ಉತ್ಸಾಹಿ ಯುವ ರೈತ ಒಣ ಬೇಸಾಯದ ಮಾರ್ಗ ಬಿಟ್ಟು, ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡದ ಕೃಷಿ ಕಾಯಕಕ್ಕೆ ಸಿದ್ಧರಾಗಿದ್ದಾರೆ.
ಧಾರವಾಡ ತಾಲೂಕಿನ ವನಹಳ್ಳಿ ಗ್ರಾಮದ ರೈತ ಮಲ್ಲಪ್ಪ ಕರೆಪ್ಪ ಮರಿಕೆಂಚಣ್ಣನವರ ಎಂಬ ಯುವಕ ರೈತಾಪಿ ಕಾಯಕ ಮೆಚ್ಚಿ ಮೆಟ್ರಿಕ್ ಶಿಕ್ಷಣಕ್ಕೆ ಶಾಲೆ ಬಿಟ್ಟು ಪೂರ್ಣ ಪ್ರಮಾಣದ ಕೃಷಿ ಕಾಯಕದಲ್ಲಿ ತಮ್ಮ 5 ಎಕರೆ ಜಮೀನಿನಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಾಣ ಯೋಜನೆಗೆ ಎಸ್ ಎಂದಿದ್ದಾರೆ.
ಒಣ ಬೇಸಾಯದ ಮಾರ್ಗದಲ್ಲಿ ಮುಂಗಾರು ಈರುಳ್ಳಿ, ಹೆಸರು ಹಿಂಗಾರು ಕಡಲೆ ಬೆಳೆದಿದ್ದ ರೈತ ಮಲ್ಲಪ್ಪ. ಈ ವರ್ಷ ಕೃಷಿಹೊಂಡ ಆಶ್ರಿತ ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಮನಸ್ಸು ಮಾಡಿದ್ದಾರೆ.
ಈಗಾಗಲೇ ದೇಶಪಾಂಡೆ ಫೌಂಡೇಶನ್ ಸಹಕಾರದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡ ರೈತರ ಏಳ್ಗೆ ಕಂಡ ಮಲ್ಲಪ್ಪ, ತಾನು ಸಹ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡದ ಕೃಷಿ ಕೈಗೊಂಡು ಮಾದರಿ ರೈತನಾಗಲು ಮುಂದೆ ಬಂದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/04/2022 05:11 pm