ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಅನ್ನದಾತನ ಐಡಿಯಾ ಕೃಷಿಹೊಂಡದ ಕೃಷಿಗೆ ಯಂತ್ರ ಶೋಧಿಸಿದ

ಗದಗ : ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬ ಮಾತಿನಂತೆ ಇಲ್ಲೋಬ್ಬ ರೈತ ತನ್ನ ಬುದ್ಧಿ ಸಾಮರ್ಥ್ಯದ ಮೂಲಕವೇ ಕೃಷಿಗೆ ಉಪಯೋಗವಾಗುವ ಯಂತ್ರ ಕಂಡು ಹಿಡಿದು ಕೃಷಿಹೊಂಡದ ಕೃಷಿ ಮೂಲಕ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಹೌದು ! ಗದಗ ಜಿಲ್ಲೆಯ ಮದಾಗನೂರ ಗ್ರಾಮದ ರೈತನೇ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ತಮ್ಮ 4 ಏಕರೆ 15 ಗುಂಟೆ ಹೊಲದಲ್ಲಿ 200/200 ಸುತ್ತಳತೆ ಕೃಷಿಹೊಂಡ ನಿರ್ಮಾಣ ಮಾಡಿಕೊಂಡು ಉತ್ತಮ ಫಸಲಿನ ಪೈರು ಬೆಳೆದವರು.

ಇನ್ನೂ ವಿಶೇಷ ಎಂದ್ರೇ,! ರೈತ ರಾಮಚಂದ್ರರೆಡ್ಡಿ ಓದಿದ್ದು ಮೇಟ್ರಿಕ್ ಶಿಕ್ಷಣವಾದ್ರೂ, ತಮ್ಮ ಚಾಕಚಕ್ಯತೆ ಮೂಲಕ ಕೃಷಿ ಕ್ಷೇತ್ರದಲ್ಲಿ ಎಡೆ ಹೊಡೆಯಲು, ಕ್ರಿಮಿನಾಶಕ ಸಿಂಪರಣೆ ಮಾಡಲು ಅನುಕೂಲವಾದ ಯಂತ್ರವೊಂದನ್ನು ಬಳಸಿ ಕೈ ಬಿಟ್ಟ ಹಳೇ ಸಾಮಗ್ರಿಗಳ ಮೂಲಕವೇ ಸಂಶೋಧನೆ ಮಾಡಿ ಕೃಷಿ ಕಾಯಕದಲ್ಲೂ ಸೈ ಎನಿಸಿಕೊಂಡಿದ್ದಾರೆ.

ಈಗಾಗಲೇ ತಮ್ಮ ಜಮೀನಿನಲ್ಲಿ ಮುಂಗಾರು ಹೆಸರು, ಮೆಣಸಿನಕಾಯಿ ಬೆಳೆದ ಇವರು ಅತಿವೃಷ್ಟಿ ನಡುವೆ ತುಸು ಆದಾಯದ ಖುಷಿ ಕಂಡು ಹಿಂಗಾರು ಕಡಲೆ, ಗೋಧಿ, ಜೋಳ, ಬೆಳೆದು ಭರ್ಜರಿ ಲಾಭದ ನಿರೀಕ್ಷೆಯಲ್ಲಿ ಇದ್ದಾರೆ.

ಇದೇ ಮೊದಲು ಒಣ ಬೇಸಾಯದ ಮೂಲಕವೇ ಅಲ್ಪ ಆದಾಯದಲ್ಲಿ ತೃಪ್ತಿಪಟ್ಟಿದ್ದ ರಾಮಚಂದ್ರರೆಡ್ಡಿ ಕೃಷಿಹೊಂಡದ ಖುಷಿಯ ಮೂಲಕವೇ ವಾರ್ಷಿಕ 3 ಲಕ್ಷ ಆದಾಯಕ್ಕೆ ಸೈ ಎನ್ನುವ ಸಂಭ್ರಮದಲ್ಲಿ ಇದ್ದಾರೆ. ಒಟ್ಟಾರೆ ಕೃಷಿ ಕ್ಷೇತ್ರದಲ್ಲಿ ಯಾಂತ್ರಿಕರಣದ ತಿಳುವಳಿಕೆ ಮೂಲಕ ಕೃಷಿಹೊಂಡದ ಪ್ರಯೋಗದ ಮೂಲಕ ರೈತ ರಾಮಚಂದ್ರರೆಡ್ಡಿ ಇತರರಿಗಿಂತ ಭಿನ್ನ ಎನಿಸಿಕೊಂಡಿದ್ದಾರೆ.

Edited By : Shivu K
Kshetra Samachara

Kshetra Samachara

20/01/2022 05:53 pm

Cinque Terre

64.1 K

Cinque Terre

0

ಸಂಬಂಧಿತ ಸುದ್ದಿ