ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಸರ್ಕಾರಿ ನೌಕರನ ಕೃಷಿ ಪ್ರೇಮ, ಕೃಷಿಹೊಂಡದ ಕೃಷಿಯಲ್ಲಿ ಲಕ್ಷ ಲಕ್ಷ ಕಂಡ

ಗದಗ: ಇಲ್ಲೋಬ್ಬ ಸರ್ಕಾರಿ ನೌಕರ, ತನ್ನ ನೌಕರಿ ಜೊತೆ ಕೃಷಿ ಕೆಲಸವನ್ನು ಮಾಡ್ತಾರೆ, ಅದರಲ್ಲೇ ಖುಷಿ ಕಾಣ್ತಾರೆ, ಅದರಲ್ಲೂ ರಜಾ ದಿನಾ ಸಿಕ್ರೇ ಸಾಕು ಇವರ ಕೃಷಿ ಪ್ರೇಮಕ್ಕೆ ಮತ್ತೋಂದು ಅವಕಾಶ ಒದಗಿದಂತೆ ಹೊಸ ಹೊಸ ಕೆಲಸಕ್ಕೆ ಅಣಿಯಾಗಿ ಬಿಡ್ತಾರೆ.

ಸ್ವಾಮಿ ಇತ್ತಿಚಿಗೆ ಕೃಷಿ ಭೂಮಿ ಪ್ರಾಮುಖ್ಯತೆ, ಮಣ್ಣಿನ ಜೊತೆ ಬೆವರು ಸುರಿಸಿ ಅನ್ನ ಬೆಳೆಯುವ ಕಾಯಕಕ್ಕೆ ಡಿಮ್ಯಾಂಡ್ ಹೆಚ್ಚಿದೆ, ಅದರಲ್ಲೂ ವಿಶೇಷವಾಗಿ ನೌಕರರಸ್ಥರು ಸಹ ಕೃಷಿಗೆ ಮನ ಸೋಲುತ್ತಲಿದ್ದು, ಅದರಂತೆ ಉಮೇಶ್ ತಿರ್ಲಾಪೂರ ಸಹ ಭೂಮಿತಾಯಿಯ ಸೆರಗಲ್ಲೇ ಕುಡಿ ಹೊಣ್ಣಿನ ಫಲ ಬೆಳೆದಿದ್ದಾರೆ.

ಗದಗ ಜಿಲ್ಲೆಯ ಬೆಳಹೊಡ ಗ್ರಾಮ ಪಂಚಾಯಿತಿ ಮದಗಾನೂರ ಗ್ರಾಮದ ತಮ್ಮ 4 ಎಕರೆ 15 ಗುಂಟೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 150/150 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಮುಂಗಾರು ಸಂಪೂರ್ಣ ಹೆಸರು ಬೆಳೆ ಬೆಳೆದು ಅತಿವೃಷ್ಟಿ ನಡುವೆ ಅಲ್ಪ ಲಾಭ ಕಂಡರೂ, ಇದೀಗ ಹಿಂಗಾರು ಹೊಸ ಹಿಗ್ಗು ತಂದಿದೆ.

ಈಗಾಗಲೇ ಹಿಂಗಾರು ಬೆಳೆ ಕಡಲೆ, ಕುಸುಬೆ, ಅತಿ ಸುಂದರವಾಗಿ ಬೆಳೆದಿದ್ದು, ಉತ್ತಮ ಆದಾಯದ ಗರಿ ಗೆದರಿದೆ, ಇದರ ಜೊತೆಗೆ ಕೊತ್ತಂಬರಿ, ಮೆತ್ತೆ ಸೊಪ್ಪು ಹಾಗೂ ಮಸಾಲೆ ಪದಾರ್ಥಕ್ಕೆ ಬೇಡಿಕೆ ಹೆಚ್ಚಿದ ಹವೀಜ ಸಹ ಇವರ ಜಮೀನಿನಲ್ಲಿ ಒಟ್ಟು ಬೆಳೆಗಳ ಲೆಕ್ಕದಲ್ಲಿ ವಾರ್ಷಿಕ 4 ಲಕ್ಷ ಆದಾಯದ ಕಳಶ ಹೊತ್ತಿದೆ.

ಒಟ್ಟಾರೆ ತಮ್ಮ ಕೈಯಲ್ಲಿ ಉದ್ಯೋಗ ಇದ್ರೂ, ತಿಂಗಳು ಸಂಬಳ ಬಂದ್ರೂ, ಕೃಷಿ ಪ್ರೇಮ ಬಿಡದೇ ಇವರು ದೇಶಪಾಂಡೆ ಫೌಂಡೇಶನ್ ಸಹಾಯ ಪಡೆದು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿ ಆ ಮೂಲಕ ಮಣ್ಣಿನ ಜೊತೆ ಶ್ರಮದ ನಂಟು ಹೊಂದಿರುವ ಉಮೇಶ್ ತಿರ್ಲಾಪೂರ ಉತ್ತಮ ಕೃಷಿಕ ಎಂಬ ತತ್ವಕ್ಕೆ ನಮ್ಮದೊಂದು ಸಲಾಂ.

Edited By : Manjunath H D
Kshetra Samachara

Kshetra Samachara

18/01/2022 07:36 am

Cinque Terre

87.69 K

Cinque Terre

3

ಸಂಬಂಧಿತ ಸುದ್ದಿ