ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ರೈತನ ಬದುಕಿಗೆ ಖಾರವಾದ ಮೆಣಸಿನಕಾಯಿ

ವರದಿ: ಬಿ.ನಂದೀಶ

ಅಣ್ಣಿಗೇರಿ : ಧಾರವಾಡ ಜಿಲ್ಲೆ ಸೇರಿದಂತೆ ಅಣ್ಣಿಗೇರಿ ತಾಲೂಕಿನ ಗ್ರಾಮಗಳಲ್ಲಿ ಮೆಣಸಿನಕಾಯಿ ಬೆಳೆಯನ್ನು ಈ ಭಾಗದ ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ ಯಾಕೋ ಏನೋ ಎರಡು ಮೂರು ವರ್ಷದಿಂದ ಈ ಮೆಣಸಿನಕಾಯಿ ರೈತರ ಬದುಕಿಗೆ ಖಾರವಾಗಿದೆ.

ಎರಡು-ಮೂರು ವರ್ಷಗಳಿಂದ ರೈತನಿಗೆ ಈ ಮೆಣಸಿನಕಾಯಿ ನೆರವಾಗುತ್ತಿಲ್ಲ. ಅತಿವೃಷ್ಟಿ-ಅನಾವೃಷ್ಟಿಯಿಂದ ಕಳೆದ ಎರಡು ಮೂರು ವರ್ಷಗಳಿಂದ ರೈತನಿಗೆ ಈ ಬೆಳೆಯಿಂದ ನಷ್ಟವಾಗಿದೆ. ಈ ವರ್ಷ ಎಲ್ಲ ಸರಿಯಾಗಿ ಬರುತ್ತೆ ಅನ್ನುವಷ್ಟರಲ್ಲಿ ಯಾವುದು ರೋಗದಿಂದ ಚೆನ್ನಾಗಿ ಬಂದಿದ್ದ ಮೆಣಸಿನಕಾಯಿ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ರೈತನ ಬಾಳು ಹೇಗಾಗಿದೆ ಅಂದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರೈತ ಕಷ್ಟ ಪಟ್ಟು ಬಿತ್ತಿ ಬೆಳೆದು ಸಾಕಷ್ಟು ಹಣ ಖರ್ಚು ಮಾಡಿ, ಕೀಟ ನಾಶಕಗಳನ್ನು ಹೊಡೆದು ಇನ್ನೇನು ಬೆಳೆ ಕೈಗೆ ಬರುತ್ತೆ ಎನ್ನುವಷ್ಟರಲ್ಲಿ ಈ ರೋಗದಿಂದ ಎಲ್ಲಾ ಮೆಣಸಿನಕಾಯಿಗಳು ಸಂಪೂರ್ಣ ಹಾಳಾಗಿರುತ್ತದೆ.

ಇನ್ನು ಖರ್ಚು ಮಾಡಿದ ಒಂದು ಭಾಗದಷ್ಟು ಸಹ ರೈತನಿಗೆ ಲಾಭ ವಾಗಿಲ್ಲ. ಇದರಿಂದ ರೈತನ ಬೆನ್ನೆ ಮುರಿದಂತಾಗಿದೆ. ಒಟ್ಟಾರೆಯಾಗಿ ರೈತನಿಗೆ ಮೆಣಸಿನಕಾಯಿ ಬೆಳೆ ಖಾರವಾಗಿದೆ. ಈ ಬಗ್ಗೆ ತಾಲೂಕಿನ ಭದ್ರಾಪುರ ಗ್ರಾಮದ ಬಸವರಾಜ್ ಗಾಣಿಗೇರ್ ಎಂಬ ರೈತ ತನ್ನ ಅಲಳನ್ನು ತೋಡಿಕೊಂಡಿದ್ದು ಹೀಗೆ.

Edited By : Nagesh Gaonkar
Kshetra Samachara

Kshetra Samachara

09/01/2022 04:46 pm

Cinque Terre

28.37 K

Cinque Terre

0

ಸಂಬಂಧಿತ ಸುದ್ದಿ