ನವಲಗುಂದ : ಇಲ್ಲೋಂದು ಗ್ರಾಮದಲ್ಲಿ ಕೃಷಿಹೊಂಡದ ಜೀವ ಜಲ ಬೆವರಿನ ಮಕ್ಕಳು ಈ ರೈತರನ್ನ ನಾಲ್ಕು ಕಾಸು ಕುಡಿ ಇಡುವಂತೆ ಮಾಡಿ. ಕೃಷಿಯಲ್ಲೇ ಎಲ್ಲಿಲ್ಲದ ಖುಷಿ ತಂದು ಹೊಸ ಹೊಸ ಬೆಳೆ ಪ್ರಯೋಗಕ್ಕೆ ಹೊಸ ಅವಕಾಶ ಕಲ್ಪಿಸಿ ಕೊಟ್ಟಿದೆ.
ಒಣ ಬೇಸಾಯದ ಮಾರ್ಗದಲ್ಲೆ ಭೂಮಿಗೆ ಹಾಕಿದ ಅಸಲೇ ಆದಾಯ ಬಾರದ ಕೃಷಿ ಕ್ಷೇತ್ರವನ್ನು ಇಂದು ನಾಲ್ಕೂ ಕಾಸು ಕೂಡಿಡುವ ಹಂತಕ್ಕೆ ತಂದಿದ್ದೇ, ಈ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಯೋಜನೆ, ಆ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡ ನವಲಗುಂದ ತಾಲೂಕಿನ ಶಾನವಾಡ ಗ್ರಾಮದ ರೈತ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ ಖಾನಣ್ಣನವರ ಬರೋಬ್ಬರಿ ವಾರ್ಷಿಕ 10 ಲಕ್ಷ ಆದಾಯಕ್ಕೆ ಸೈ ಎಂದಿದ್ದಾರೆ.
ಇವ್ರೇ ರೈತ ಮಂಜುನಾಥ ಖಾನಣ್ಣನವರ ತಮ್ಮ ಒಟ್ಟು 32 ಎಕರೆ ಜಮೀನಿಗೆ ನೆರವಾಗುವಂತೆ 200/120 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ಇವ್ರು, ಶ್ರಮದ ದುಡಿಮೆಯಲ್ಲೇ ಸಾಧನೆ ಮಾಡಿ ಮುಂಗಾರು ಹೆಸರು, ಗೋವಿನಜೋಳ, ಹತ್ತಿ, ಸೂರ್ಯಕಾಂತಿ, ಜೊತೆ ಜೊತೆಗೆ ರೇಷ್ಮೆ ಕೃಷಿ ಕೈಗೊಂಡು ಈಗಾಗಲೇ ಮುಂಗಾರಿನ ಆದಾಯವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಓದಿದ್ದು ಮೇಟ್ರಿಕ್ ಶಿಕ್ಷಣವಾದರೂ, ತಮ್ಮ ಕೃಷಿ ಅನುಭವದ ಮೂಲಕ ನಾಲ್ಕು ಜನಕ್ಕೆ ಕೃಷಿ ಕ್ಷೇತ್ರದ ಲಾಭ ನಷ್ಟದ ಮಾರ್ಗ ತೋರಿಸಿದ ರೈತ ಮಂಜುನಾಥ, ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಮನೆ ಮನೆಗೆ ಕೃಷಿಹೊಂಡದ ಬೇಸಾಯದ ತಿಳುವಳಿಕೆ ನೀಡಿ ಅದೆಷ್ಟೋ ಕೃಷಿಹೊಂಡ ನಿರ್ಮಾಣಕ್ಕೆ ಪಾತ್ರರಾಗಿದ್ದಾರೆ.
ಒಟ್ಟಿನಲ್ಲಿ ಈಗಾಗಲೇ 6 ಲಕ್ಷ ಆದಾಯದ ದಡ ಮುಟ್ಟಿರುವ ರೈತ ಮಂಜುನಾಥ ಖಾನಣ್ಣನವರ ಕೃಷಿ ಬದುಕು. ಈ ಬಾರಿ ಹಿಂಗಾರು ಬೆಳೆಯ ಲಾಭ ಸೇರಿ 10 ಲಕ್ಷ ಸನಿಹದಲ್ಲಿದ್ದು, ಕೃಷಿಹೊಂಡದ ನಿರ್ಮಾಣದ ರೈತರ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಮಳೆ ಲೆಕ್ಕಿಸಿ ಬೆಳೆ ಬೆಳೆಯುತ್ತಿದ್ದ ರೈತರೀಗ ಬೆಳೆಗೆ ತಕ್ಕಂತೆ ನೀರನ್ನು ವಿನಿಯೋಗಿಸುವ ವಾತಾವರಣ ಕೃಷಿಹೊಂಡ ನಿರ್ಮಾಣ ಕಾರ್ಯ ರೈತರ ಬಾಳಲ್ಲಿ ಫಲ ತಂದು ಕೊಟ್ಟಿದೆ.
Kshetra Samachara
08/11/2021 09:21 am