ಕುಂದಗೋಳ : ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹಿಂಗಾರು ಬಿತ್ತನೆ ಬೀಜ ವಿತರಣೆಯಲ್ಲಿ ಬೀಜದ ಜೊತೆ ಮಣ್ಣಿನ ಪೋಷಕಾಂಶ ವೃದ್ಧಿಸಲು ಇಲಾಖೆ ನೀಡುತ್ತಿರುವ ಜಿಂಕ್ ಗೊಬ್ಬರ ಪಡೆಯಲು ರೈತರು ಚಕಾರ ಎತ್ತುತ್ತಿದ್ದಾರೆ.
ಹೌದು ! ಈಗಾಗಲೇ ಕುಂದಗೋಳ ರೈತ ಸಂಪರ್ಕ ಕೇಂದ್ರದಲ್ಲಿ ಸಂಗ್ರಹಣೆ ಇರುವ ಹಿಂಗಾರು ಕಡಲೆ ಮತ್ತು ಕುಸುಬೆ ಬೀಜ ವಿತರಿಸುವಾಗ ಇಲಾಖೆ ಅಧಿಕಾರಿಗಳು ಮಣ್ಣಿನ ಪೋಷಕಾಂಶ ವೃದ್ಧಿಸಲು ಮತ್ತು ಕಾಳುಗಳ ತೂಕ ಹೆಚ್ಚಳಕ್ಕೆ ಅನುಕೂಲವಾಗಲು ರೈತರಿಗೆ ಜಿಂಕ್ ಗೊಬ್ಬರವನ್ನು ಹಿಂಗಾರು ಬೀಜದ ಜೊತೆ ನೀಡುವ ಕ್ರಮಕ್ಕೆ ರೈತರು ಧ್ವನಿ ಎತ್ತಿ ನಮ್ಗೆ ಬೀಜವಷ್ಟೇ ಸಾಕು ಜಿಂಕ್ ಗೊಬ್ಬರ ಬೇಡಾ ನಿರಾಕರಿಸುತ್ತಿದ್ದಾರೆ.
ಇದಲ್ಲದೆ ಎಂದಿನಂತೆ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಪರಿಣಾಮ ರೈತರು ಬೀಜ ಪಡೆಯಲು ಎರಡೆರಡು ತಾಸು ಕಾಯುವ ಸ್ಥಿತಿಗೆ ಉತ್ತರ ಸಿಗದೆ, ರೈತರು ಎಕರೆಗೆ ಕೇವಲ ಒಂದು ಪಾಕಿಟ್ ಬೀಜ ಸಾಕಾಗುವುದಿಲ್ಲ ಹೆಚ್ಚಿನ ಬೀಜ ನೀಡುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
Kshetra Samachara
07/10/2021 04:50 pm