ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಕೃಷಿ ಹೊಂಡದ ನೀರಿನಿಂದ ಬಂದ ಆದಾಯ ಅಧಿಕ

ಹುರುಪಿನಿಂದ ದುಡಿಯುವ ಉತ್ಸಾಹವಿದೆ, ಒಳ್ಳೆಯ ಇಳುವರಿಯ ಬೆಳೆ ಬೆಳೆಯಬೇಕೆನ್ನುವ ಛಲವಿದೆ, ಆದ್ರೆ ಹದಭರಿತ ಮಳೆ ಬಾರದ ಕಾರಣ ರೈತರು ಮಳೆಗಾಗಿ ಪರಿತಪಿಸುವ ಪರಿ ಸಾಮಾನ್ಯವಾಗಿದೆ.

ಅದರಲ್ಲೂ ನವಲಗುಂದ ನರಗುಂದದ ಭಾಗದಲ್ಲಿ ಬೋರ್ ವೆಲ್ ಕೊರೆಸಿದರೂ ಕೃಷಿಗೆ ಯೋಗ್ಯವಾದ ನೀರು ದೊರೆಯದಿರುವುದು ಇಲ್ಲಿನ ಅನ್ನದಾತರಿಗೆ ನುಂಗಲಾರದ ತುತ್ತಾಗಿದೆ.

ಈ ರೀತಿ ಸಮಸ್ಯೆಯ ಸುಳಿಯಲ್ಲಿರುವ ರೈತರಿಗೆ ಭರವಸೆ ಮೂಡಿಸಿದ್ದು ದೇಶಪಾಂಡೆ ಫೌಂಡೇಶನ್ .

ಒಮ್ಮೆ ಮಳೆಯಾದ್ರೆ ಎರಡು ಬಾರಿ ಉತ್ತಮ ಬೆಳೆ ಬೆಳೆಯಲು ಪೂರಕವಾಗುವಂತಹ ಕೃಷಿ ಹೊಂಡಗಳನ್ನು ನಿರ್ಮಿಸಿಕೊಡುವ ಮೂಲಕ ದೇಶಪಾಂಡೆ ಫೌಂಡೇಶನ್ ದುಡಿಯುವ ರೈತರಿಗೆ ಬಲವಾಗಿದೆ.

ಇಂದಿನ ದೇಶ್ ಕೃಷಿಯಲ್ಲಿ ಸಂಚಿಕೆಯಲ್ಲಿ ಹೊಂಡದ ನೀರು ಬಳಸಿಕೊಂಡು ಒಣ ಭೂಮಿಯಲ್ಲಿ ನೀರಾವರಿಯಂತೆ ಬೆಳೆ ಬೆಳೆದ ಅನ್ನದಾತನ ಬಗ್ಗೆ ತಿಳಿಯೋಣ ಬನ್ನಿ..

Edited By : Shivu K
Kshetra Samachara

Kshetra Samachara

26/08/2021 06:01 pm

Cinque Terre

98.91 K

Cinque Terre

0

ಸಂಬಂಧಿತ ಸುದ್ದಿ