ಕುಂದಗೋಳ : ಬು.ತರ್ಲಘಟ್ಟ ಗ್ರಾಮ ಪಂಚಾಯಿತಿಯಲ್ಲಿ ನಡೆದ ಅವ್ಯವಹಾರದ ವಿರುದ್ಧ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಣ್ಣ ಕಳಸಣ್ಣನವರ ಕೈಗೊಂಡ ಉಪವಾಸ ಸತ್ಯಾಗ್ರಹ ಬರೋಬ್ಬರಿ ಹನ್ನೋಂದು ದಿನ ಪೂರೈಸಿದರು.
ಈ ಬಗ್ಗೆ ಯಾವುದೇ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬು.ತರ್ಲಘಟ್ಟ ಗ್ರಾಮದಿಂದ "ನೇಗಿಲು ಹೊತ್ತುಕೊಂಡು" ಗ್ರಾಮಸ್ಥರ ಸಹಕಾರದ ಜೊತೆ ಕುಂದಗೋಳ ತಹಶೀಲ್ದಾರ ಕಚೇರಿಯವರೆಗೆ ಪ್ರತಿಭಟನೆ ಕೈಗೊಂಡು ಗ್ರಾಮಸ್ಥರು ತಹಶೀಲ್ದಾರ ಕಚೇರಿ ಒಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.
ಪ್ರತಿಭಟನಾ ನಿರತರು ತಾಲೂಕು ಪಂಚಾಯಿತಿ ಅಧಿಕಾರಿಗಳು, ಅವ್ಯವಹಾರದ ಎಸಗಿದ ಬು.ತರ್ಲಘಟ್ಟ ಗ್ರಾಮ ಪಂಚಾಯಿತಿ ನೌಕರರನ್ನು ಕೂಡಲೇ ಅಮಾನತು ಮಾಡಿ, ಅವ್ಯವಹಾರದ ಹಣವನ್ನು ವ್ಯಯಕ್ತಿಕವಾಗಿ ಅವರೇ ಭರಿಸುವಂತೆ ಪಟ್ಟು ಹಿಡಿದು ಜಿಲ್ಲಾಧಿಕಾರಿಗಳೇ ಬಂದು ಮನವಿ ಸ್ವೀಕರಿಸಬೇಕೆಂದು ಹೋರಾಟ ಮುಂದುವರೆಸಿದ್ದಾರೆ.
ಗ್ರಾಮಸ್ಥರ ಈ ಹೋರಾಟಕ್ಕೆ ಧಾರವಾಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ, ಕರವೇ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷ ಕಲ್ಲಪ್ಪ ಹರಕುಣಿ, ರೈತ ಸಂಘಟನೆಗಳ ವಿವಿಧ ಮುಖಂಡರಗಳು ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.
Kshetra Samachara
26/01/2021 09:44 am