ಕುಂದಗೋಳ : ತಾಲೂಕಿನ ಮೆಣಸಿನಕಾಯಿ ಎಂದ್ರೇ ಕೇವಲ ಭಾಲತವಷ್ಟೇ ಅಲ್ಲಾ ವಿದೇಶಗಳಿಗೆ ರಫ್ತಾಗುವಷ್ಟು ಬೇಡಿಕೆ ಸೃಷ್ಟಿಸಿ ಹೆಸರಾಗಿತ್ತು, ಈ ಚಳಿಗಾಲದ ಆರಂಭದಲ್ಲಿ ಹಳ್ಳಿಗಳ ಕಣ, ಕಟ್ಟೇ ಎಲ್ಲಿ ನೋಡಿದರಲ್ಲಿ ರಾಶಿ ರಾಶಿ ಕಾಣುತ್ತಿದ್ದ ಮೆಣಸಿನಕಾಯಿ ಬೆಳೆ ಈ ವರ್ಷ ಹೇಳ ಹೆಸರಿಲ್ಲದಂತಾಗಿದೆ.
ಈ ಬಾರಿಯ ಅತಿವೃಷ್ಟಿಗೆ ಧಾರಾವಾಡ ಜಿಲ್ಲೆಯಲ್ಲಿ ಬರೋಬ್ಬರಿ 28.156 ಹೇಕ್ಟರ್ ಪ್ರದೇಶದ ಮೆಣಸಿನಕಾಯಿ ಬೆಳೆ ಹಾನಿಯಾಗಿದ್ದು, ಅದರಲ್ಲಿ ಕುಂದಗೋಳ ತಾಲೂಕಿನ 10.350 ಹೇಕ್ಟರ್ ಪ್ರದೇಶದ ಮೆಣಸಿನಕಾಯಿ ಬೆಳೆ ಹಾನಿಗೆ ತುತ್ತಾಗಿದೆ, ಇನ್ನು ಕೆಲ ರೈತರು ತಾವೇ ಬೆಳೆಸಿದ ಮೆಣಸಿನಕಾಯಿ ಗಿಡಗಳನ್ನು ಇಳುವರಿ ಇಲ್ಲದ ಕಾರಣ ಕಿತ್ತೆಸೆದು ಮರಳಿ ಹಿಂಗಾರು ಬೀಜ ಭೂಮಿಗೆ ಹಾಕಿದ್ದಾರೆ.
ಈ ಪರಿಣಾಮ ಕುಂದಗೋಳ ತಾಲೂಕಿನಲ್ಲಿ ನೂರು ರೈತರ ಪ್ರತಿಶತದಲ್ಲಿ ಕೇವಲ ನಾಲ್ಕರಿಂದ ಐದು ಜನ ಮಾತ್ರ ಮೆಣಸಿನಕಾಯಿ ಬೆಳೆ ಬೆಳೆದಿದ್ದು , ಆ ಬೆಳೆ ಉಳಿಸಿಕೊಳ್ಳಲು ರೈತರು ಹಗಲು ರಾತ್ರಿ ಎನ್ನದೆ ಹೊಲಗಳಲ್ಲಿ ಗುಡಿಸಲು ಹೂಡಿ ಕಾಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಸಂಪಾದಿಸಿರುವ ಮೆಣಸಿನಕಾಯಿಗೆ ಕಳ್ಳರ ಕಾಟ ಅತಿಯಾಗಿದ್ದು ರೈತರು ಹೊಲ ಬಿಟ್ಟು ಕದಲದ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ರೈತರ ಮಾತೇನು ನೀವೆ ಹೇಳಿ.
ನಿತ್ಯ ಮೊಬೈಲ್ ರಾತ್ರಿಯಾದ್ರೇ ಸಾಕು ಕೈಯಲ್ಲೋಂದು ಬ್ಯಾಟರಿ, ಹಗಲಲ್ಲಿ ಕೋಲು ಹಿಡಿದು ಹಗಲಿರುಳೆನ್ನದೆ ಹೊಲ ಕಾಯುತ್ತಿರುವ ರೈತ ಕೇವಲ 1 ಕೆ.ಜಿ ಮೆಣಸಿನಕಾಯಿ ಕಳ್ಳತನವಾದ್ರೇ 350 ರಿಂದ 400 ರೂಪಾಯಿ ನಷ್ಟವಾಗುತ್ತೆ, ಈ ಬೆಳೆಗೆ ಹಾಕಿದ ಅಸಲು ಜೊತೆ ಲಾಭ ನಮ್ಮ ಕೈ ಸೇರಬೇಕಾದರೆ ಈ ಕಾಯುವಿಕೆ ನಮಗೆ ಖಾಯಂ ಎನ್ನುತ್ತಾರೆ.
ಒಟ್ಟಾರೆ ರೈತರ ಪರಿಸ್ಥಿತಿಗೆ ಅತಿವೃಷ್ಟಿ ದೊಡ್ಡ ಆಘಾತವನ್ನೇ ನೀಡಿದ್ದು ಅನ್ನದಾತನಿಗೂ ಕಳ್ಳನ ಭಯ ಖಾಯಂ ಆಗಿದೆ.
Kshetra Samachara
09/01/2021 12:10 pm