ಧಾರವಾಡ: ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಧಾರವಾಡದಲ್ಲಿ ಜಾಗಟೆ ಬಾರಿಸುವ ಮೂಲಕ ಬೆಂಬಲ ಸೂಚಿಸಲಾಯಿತು.
ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ನೇತೃತ್ವದಲ್ಲಿ ಧಾರವಾಡದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಶ್ರೀಶೈಲಗೌಡ ಕಮತರ, ರವಿ ಗೌಳೆ, ಸಲೀಂ ಸಂಗನಮುಲ್ಲಾ,
ವಿಲ್ಸನ್ ಫರ್ನಾಂಡಿಸ್, ಐ.ಬಿ. ನಿಡಗುಂದಿ, ವಿನಾಯಕ ಕಂಬಳಿ, ರಮೇಶ ಕಾಂಬಳೆ ಸೇರಿದಂತೆ ಇನ್ನೂ ಅನೇಕರು ತಟ್ಟೆ ಬಾರಿಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರಲ್ಲದೇ, ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರು
Kshetra Samachara
28/12/2020 10:04 am