ನವಲಗುಂದ : ರೈತರಿಗೆ ಬೆಳೆ ಸಮೀಕ್ಷೆ ಸರ್ಕಾರದಿಂದ ರೈತರಿಗೆ ಸಹಾಯವಾಗಲು ಬಿಟ್ಟಿರುವ ಬೆಳೆ ಸಮೀಕ್ಷೆ ಆಪ್ ನಲ್ಲಿ ಸರಿಯಾಗಿ ಬೆಳೆ ಸಮೀಕ್ಷೆ ಯಾಗಿರುವುದಿಲ್ಲ ಆದಕಾರಣ ಸಹಾಯಕ ಕೃಷಿ ನಿರ್ದೇಶಕರು ಅವರ ಸಮಕ್ಷಮದಲ್ಲಿ ರೈತರು ಖುದ್ದು ಆಗಿ ಹೊಲಗಳಿಗೆ ಹೋಗಿ ಬೆಳೆ ಸಮೀಕ್ಷೆ ಮಾಡಿದರು ಕೂಡ ಸಮೀಕ್ಷೆ ಆಗದೆ ಇರುವ ಕಾರಣ ರೈತರು ಕಂಗಾಲಾಗಿದ್ದಾರೆ,
ಬೆಳೆ ಸಮೀಕ್ಷೆ ಆಪ್ ನಲ್ಲಿ ಈ ಸರ್ವೇ ನಂಬರ್ ಲಭ್ಯವಿಲ್ಲ ಎಂಬ ಮಾಹಿತಿ ಬರುತ್ತಿದ್ದು. ಇದಕ್ಕೆ ಕಾರಣ ಏನೆಂಬುದು ತಿಳಿಯದ ಪರಿಸ್ಥಿತಿ ರೈತರಿಗೆ ಬಂದೊದಗಿದೆ. ಆದ್ರೆ ಈಗಾಗಲೇ 2020-21ನೇ ಸಾಲಿನ ಬೆಳೆ ವಿಮೆ ತುಂಬಿದ್ದು ಇದೆ.
ಆದ್ರೆ ಬೆಳೆ ಸಮೀಕ್ಷೆ ಯಾಗಿಲ್ಲ ಸರ್ಕಾರ ಬೆಳೆ ಸಮೀಕ್ಷೆ ಇಂದ ಮಾತ್ರ ಸರ್ಕಾರಿ ಸೌಲಭ್ಯಗಳನ್ನು ಪಡೆಯಬಹುದು ಅಂತ ಹೇಳಿದೆ ಈಗಾಗಲೇ ಸಾವಿರಾರು ರೈತರು ಬೆಳೆವಿಮೆ ತುಂಬಿದ ಹಣಕ್ಕೆ ಯಾರು ಹೊಣೆ....!
ಇದನ್ನು ಸರಿಪಡಿಸಲು ಅಧಿಕಾರಿಗಳನ್ನ ಕೇಳಿದ್ರು ಕೂಡ ಈ ಸರ್ವೇ ನಂಬರಗಳು ನಕಾಶೆಯಾಗಿರುವುದಿಲ್ಲ ಎಂದು ಕೆಲ ಅಧಿಕಾರಿಗಳು ಹೇಳತ್ತಿದ್ದು ತಮ್ಮ ಕೆಲಸದ ಕಾರ್ಯವೈಖರಿಯನ್ನು ಎತ್ತಿ ತೋರಿಸುತ್ತಿದೆ.
ಈಗಾಗಲೇ ಬೆಳೆವಿಮೆ ತುಂಬಿದ್ದು ಬೆಳೆ ಸಮೀಕ್ಷೆ ಆಗದೇ ಇರುವ ಕಾರಣ ರೈತರಿಗೆ ತೊಂದರೆಯಾಗುತ್ತಿದ್ದು ಈ ಸಮಸ್ಯೆಯನ್ನು ಬಗೆಹರಿಸಿ ಕೊಡಲೆಂದು ಉಪತಶಿಲ್ದಾರ್ ಹೊಕ್ರಾಣಿ ಅವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಕ್ರಪ್ಪ ಹಳ್ಳದ, ಮಂಜುನಾಥ ಸುಬೇದಾರ, ಎಲ್ಲಪ್ಪ ಹಂಚಿನಾಳ, ಗೂಳಪ್ಪ ಅಣ್ಣಿಗೇರಿ, ಗಂಗಾಧರ ಹಳ್ಳದ, ಸಿದ್ದಪ್ಪ ಹಳ್ಳದ, ರವಿ ಹಳ್ಳದ, ಗೋಪಾಲ್ ಜೋಷಿ, ಶಂಕರಗೌಡ ತಿಪ್ಪಿಮನಿ ಅನೇಕ ರೈತಬಾಂಧವರು ಉಪಸ್ಥಿತರಿದ್ದರು.
Kshetra Samachara
23/09/2020 07:44 pm