ಪಬ್ಲಿಕ್ ನೆಕ್ಸ್ಟ್ ವಿಶೇಷ: ಮಲ್ಲಿಕಾರ್ಜುನ ಪುರದನಗೌಡರ
ಕಲಘಟಗಿ:ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ 30 ವರ್ಷಗಳ ಹಳೆಯ ದಾಖಲೆಯನ್ನು
ಆ ಎತ್ತುಗಳು ಪುಡಿಗಟ್ಟಿವೆ, ಉಳುವಾ ಯೋಗಿಯ ನೋಡಲ್ಲಿ ಉಳುವಾ ಯೋಗಿಯ ನೋಡಲ್ಲಿ ಎಂಬ ಗಾದೆಯ ಮಾತಿನಂತೆ,ರೈತನ ಸಾಹಸ ನೋಡಿ ಇಡಿ ಗ್ರಾಮಸ್ಥರೇ ಸಾಹಸ ಮಾಡಿರುವ ರೈತನನ್ನು ಹಾಗೂ ಎತ್ತುಗಳನ್ನು ಹಾಡಿ ಹೋಗುಳುತ್ತಿದ್ದಾರೆ.
ಇದೇನಪ್ಪ ! ಅಂತಹ ಸಾಧನೆ ಎಂದಿರಾ,ಇಲ್ಲಿದೇ ನೋಡಿ ಆ ಸ್ಟೋರಿ,ಗಂಜಿಗಟ್ಟಿ ಗ್ರಾಮದಲ್ಲಿನ ಮತ್ತಿ ಬಸವೇಶ್ವರ ದೇವಸ್ಥಾನದ ಹತ್ತಿರ ಇದ್ದ ಸುಮಾರು 30 ಕ್ವಿಂಟಲ್ ಭಾರವಾದ ಕಲ್ಲನ್ನು ರೈತರಾದ ಮಹಾದೇವಪ್ಪ ಕಲ್ಲಪ್ಪ ಬಾರಕೇರ ಎಂಬುವವರು ತಮ್ಮ ಎತ್ತುಗಳ ಸಹಾಯದಿಂದ ನಗಾಕ್ಕೆ ಕಟ್ಟಿಕೊಂಡು 1.5 ಕಿಮೀ ಎಳೆಸಿಕೊಂಡು ಬಂದು ತಮ್ಮ ಮನೆಯ ಮುಂದೆ ಹಾಕಿ ಸಾಹಸ ಮೆರೆದಿದ್ದು,ಸಾಧನೆ ಮಾಡಿದ ರೈತ ಕುಣಿದು ಕುಪ್ಪಳಿಸಿದ್ದಾನೆ.ಇದಕ್ಕಾಗಿಯೇ ಎತ್ತುಗಳನ್ನು ಹುರಿಗೊಳಿಸಿ ಸಾಧನೆ ಮಾಡಿದ್ದಾರೆ.
ಈ ಸಾಹಸವನ್ನು ಮೂವತ್ತು ವರ್ಷಗಳ ಹಿಂದೆ ಗ್ರಾಮದ ರೈತರಾದ ಕಲ್ಲಪ್ಪ ಬಸಪ್ಪ ಕೊಪ್ಪದಗಾಣಿಗೇರ ಎಂಬವರು ಎತ್ತುಗಳಿಂದ ಕಲ್ಲನ್ನು ಎಳೆಸಿ ಮತ್ತಿ ಬಸವೇಶ್ವರ ದೇವಸ್ಥಾನದ ಹತ್ತಿರ ಬಿಟ್ಟು ಸಾಧನೆ ಮಾಡಿದ್ದರು.ಈಗ ಮಹಾದೇವಪ್ಪ ಕಲ್ಲಪ್ಪ ಬಾರಕೇರ ಸಾಧನೆ ಸರಿಗಟ್ಟಿದ್ದಾರೆ.ಮತ್ತೆ ಈ ಸಾಧನೆ ಸರಿಗಟ್ಟ ಬೇಕಾದರೆ ಕಲ್ಲನ್ನು ಮತ್ತೆ ಮತ್ತಿ ಬಸವೇಶ್ವರ ದೇವಸ್ಥಾನದ ಹತ್ತಿರ ಎತ್ತುಗಳ ಸಹಾಯದಿಂದ ಎಳೆದು ಬಿಡ ಬೇಕು.
ಗ್ರಾಮೀಣ ಸೋಗಡಿನ ಇಂತಹ ಸಾಹಸಗಳು ಕಣ್ಮರೆಯಾಗುತ್ತಿರುವಾಗ, ಮಹಾದೇವಪ್ಪ ಕಲ್ಲಪ್ಪ ಬಾರಕೇರ ಅವರ ಎತ್ತುಗಳ ಸಾಧನೆಗೆ ಇಡೀ ಗ್ರಾಮವೇ ಸಾಕ್ಷಿಯಾಗಿದ್ದು,ಕೃಷಿಯ ಜತೆಗೆ ಮಾಡಿರುವ ಇಂತಹ ಸಾಧನೆ ಯುವ ರೈತರಿಗೆ ಮಾದರಿಯಾಗಿದೆ.
Kshetra Samachara
19/09/2020 02:51 pm