ಕಲಘಟಗಿ : ಕೈಗೆ ಬಂದ ತುತ್ತು ಬಾಯಿಗೆ ಬರ್ಲೀಲ್ಲಾ ಎಂಬ ಗಾದೆ ಮಾತಿಗೆ ಕಳೆದೆರೆಡು ವರ್ಷಗಳ ರೈತನ ಬದುಕು ಸಾಕ್ಷಿಯಾದಂತಿದೆ ನೋಡಿ, ಈ ಅತಿವೃಷ್ಟಿ ಪರಿಣಾಮ ಇನ್ನೆನು ಬೆಳೆದ ಬೆಳೆ ಕೈಗೆ ಬರುತ್ತೆ ಎಂಬ ಸಮಯ ಸುರಿದ ಭಾರಿ ಮಳೆಗೆ ರೈತಾಪಿ ಉತ್ಪನ್ನಗಳು ನೀರಿಗೆ ಸಿಕ್ಕು ಹಾಳಾಗಿ ಹೋಗಿವೆ.
ಹೌದು ! ಧಾರಾವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರೈತರ ಹೊಲಗಳಲ್ಲಿನ ಅಲಸಂಧಿ, ಶೇಂಗಾ, ಗುರೆಳ್ಳು, ಸೋಯಾಬಿನ್, ಗೋವಿನಜೋಳಗಳ ಬೆಳೆ ನೀರಲ್ಲಿ ಸಿಲುಕಿ ಕೊಳೆತು ಹೋಗಿದ್ದು ರೈತರ ಬದುಕನ್ನ ವರುಣದೇವ ಕಷ್ಟದ ಕೂಪಕ್ಕೆ ತಳ್ಳಿದ್ದಾನೆ.
ಅಂದಾಜಿಗೆ ಸಿಗದಷ್ಟು ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗಳು ಹಾಳಾಗಿದ್ದು ಇತ್ತ ಮನೆಗೆ ತಂದು ಒಕ್ಕಲುತನ ಮಾಡಿದ್ರೂ ರೈತನಿಗೆ ದುಡಿದು ಕೂಲಿ ಸಿಗುವುದಾ ? ಎಂಬ ಪ್ರಶ್ನೆ ಕಾಡುತ್ತಿದೆ ಹೀಗಾಗಿ ರೈತ ದಿಕ್ಕು ತೋಚದಂತಾಗಿ ಆತಂಕದ ಮಡುವಿನಲ್ಲಿ ಸಿಲುಕಿದ್ದಾನೆ. ಇತ್ತ ಕೊರೊನಾ ಕಷ್ಟದ ಕಾಲದ ನಡುವೆಯೂ ದಿನಕ್ಕೆ 300 ಕೂಲಿ ನೀಡಿ ಪರ ಊರುಗಳಿಂದ ಆಳುಗಳನ್ನ ಕರೆಸಿ ಕೆಲಸ ಮಾಡಿಸಿದ ರೈತನಿಗೆ ಕೃಷಿ ಬಂಡವಾಳವು ಸಿಗದಾಗಿದ್ದು ಸರ್ಕಾರ ಕೊಡುವ ಪರಿಹಾರದ ಕಡೆ ಗಮನ ನೆಟ್ಟಿದ್ದಾನೆ.
Kshetra Samachara
18/09/2020 11:16 am