ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಪಟ್ಟಣದ ಮಾಚಾಪೂರ ಹತ್ತಿರ ಕಬ್ಬಿನ‌ ಹೊಲದಲ್ಲಿ ಆನೆ ಹಿಂಡು

ಕಲಘಟಗಿ:ತಾಲೂಕಿನ ಬೀರವಳ್ಳಿ ಗ್ರಾಮದಿಂದ ಕಾಲ್ಕಿತ್ತ ಆನೆ ಹಿಂಡು ಗುರುವಾರ ಬೆಳಗಿನ ಜಾವಾ ಪಟ್ಟಣದ ಮಾಚಾಪೂರ ಹತ್ತಿರ ಕಬ್ಬಿನ ಹೊಲಗಳಿಲ್ಲಿ ಕಾಣಿಸಿಕೊಂಡಿವೆ.

ಮಾಚಾಪೂರದ ಬೇಡ್ತಿಹಳ್ಳದ ಹತ್ತಿರ ಬಸಯ್ಯ ಹೆಬ್ಬಳ್ಳಿಮಠ ಹಾಗೂ ಬಸವಣ್ಣಯ್ಯ ಹೊನ್ನಳ್ಳಿ ಅವರ ಕಬ್ಬಿನ ಹೊಲಗಳಲ್ಲಿ ಬೀಡು‌ಬಿಟ್ಟು ಕಬ್ಬು ‌ಹಾಳಾ‌ ಮಾಡಿವೆ.

ಬೆಳಗಿನ‌ ಜಾವಾ ರೈತರು ಹೊಲಕ್ಕೆ ಹೋದಾಗ ಆನೆಗಳನ್ನು ಕಂಡ ಜನರು‌ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ.

ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ಹಾಗೂ ಅರಣ್ಯ ರಕ್ಷಕರು ಕಾರ್ಯಾಚರಣೆಗೆ ಇಳಿದಿದ್ದಾರೆ.ದ್ರೋಣ ಕ್ಯಾಮರಾ ಮೂಲಕ ‌ಆನೆಗಳ ಚಲನ ವಲನದ‌ ಮೇಲೆ ನಿಗಾ ಇಡಲಾಗಿದೆ.

Edited By : Nirmala Aralikatti
Kshetra Samachara

Kshetra Samachara

03/12/2020 02:00 pm

Cinque Terre

8.72 K

Cinque Terre

0

ಸಂಬಂಧಿತ ಸುದ್ದಿ