ಅಣ್ಣಿಗೇರಿ : ಅತಿವೃಷ್ಟಿ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ ರೈತರ ಪಾಲಿಗೆ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಬಿಟಿ ಹತ್ತಿ ಖರೀದಿ ಕೇಂದ್ರ ತೆರೆದಿರುವುದು ಅಣ್ಣಿಗೇರಿ ತಾಲೂಕಿನ ಸಮಸ್ತ ರೈತರಿಗೆ ವರದಾನವಾಗಿದ್ದು, ಖುಷಿಯಿಂದಲೇ ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಲುಪಿಸುತ್ತಿದ್ದಾರೆ.
ಅಣ್ಣಿಗೇರಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ತೆರೆದ ಹತ್ತಿ ಕೇಂದ್ರಕ್ಕೆ ಅಂದಾಜಿಗಿಂತ ತುಸು ಜಾಸ್ತಿಯೇ ಹತ್ತಿ ಬೆಳೆ ಆಗಮಿಸಿದ್ದು, ತಮ್ಮ ಸರದಿಗನುಸಾರ ಎಪಿಎಂಸಿಗೆ ವರ್ತಕರು ಹೇಳಿದ ಸಮಯಕ್ಕೆ ರೈತರು ಬರುವ ಕಾರಣ ಗದ್ದಲದ ಮಾಯವಾಗಿ ಅನುಕೂಲವಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರ ಪ್ರತಿ ಕ್ವಿಂಟಾಲ್ ಹತ್ತಿಗೆ 5515 ರೂಪಾಯಿ ಬೆಂಬಲ ಬೆಲೆ ರೈತರಿಗೆ ನೀಡುತ್ತಿದ್ದರು, ಅತಿವೃಷ್ಟಿ ನಡುವೆ ಹತ್ತಿ ಬೆಳೆದ ರೈತರಿಗೆ ಈ ಬಾರಿ ನಿರ್ವಹಣಾ ವೆಚ್ಚ ಅತಿಯಾಗಿದ್ದು, ಇನ್ನಷ್ಟು ಬೆಲೆ ಏರಿಸಿದ್ರೆ ತೃಪ್ತಿಕರ ಎನ್ನುತ್ತಿದ್ದಾರೆ. ಈ ಬಗ್ಗೆ ಇನ್ನೋರ್ವ ರೈತರ ಮಾತೇನು ಕೇಳ್ಬಿಡಿ.
ಕೇಳಿದ್ರಲ್ಲಾ ಒಟ್ಟಾರೆ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಬಿಟಿ ಹತ್ತಿ ಕೇಂದ್ರ ಆರಂಭ ಮತ್ತು ಅದರ ಸುವ್ಯವಸ್ಥೆಗೆ ರೈತರು ಬೇಷ್ ಎಂದಿದ್ದು, ಹೊಲದಲ್ಲಿ ಹತ್ತಿ ಬೆಳೆ ಇರುಕಾದ ಕಾರಣ ಇನ್ನಷ್ಟು ಬೆಲೆ ಏರಿಸಿದ್ರೇ ಒಳಿತು ಎಂದಿದ್ದಾರೆ. ಈ ಬಗ್ಗೆ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಬೇಕಿದೆ.
Kshetra Samachara
01/12/2020 01:32 pm