ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಭತ್ತದ ಕಣಜ‌ ಖ್ಯಾತಿಯ ಕಲಘಟಗಿಯಲ್ಲಿ ರೈತಾಪಿ ಜನರಿಂದ ಭತ್ತದ ಕಟಾವು‌

ಕಲಘಟಗಿ:ಮಲೆನಾಡಿನ ಸೆರಗಿನ ಭತ್ತದ ಕಣಜ‌ ಖ್ಯಾತಿಯ ಕಲಘಟಗಿ ತಾಲೂಕಿನಲ್ಲಿ ರೈತಾಪಿ ಜನರು ಹಂಗಾಮಿಗೆ ಸಜ್ಜಾಗಿದ್ದು,ಭತ್ತದ ಕಟಾವು‌ ಮಾಡುತ್ತಿದ್ದಾರೆ.

ಪ್ರಸಕ್ತ ವರ್ಷ ಮಳೆ ಹೆಚ್ಚು ಆಗಿದ್ದು,ತಾಲೂಕಿನಲ್ಲಿ ಬೆಳೆಯಲಾದ ಭತ್ತದ ಇಳುವರಿ ಉತ್ತಮವಾಗಿದ್ದು,ಭತ್ತದ ಕೊಯ್ಲು ಮಾಡುವ ಕೆಲಸದಲ್ಲಿ ರೈತರು ತೊಡಗಿದ್ದಾರೆ.ಈ ಹಿಂದೆ ಕಲಘಟಗಿ ಭತ್ತದ ಕಣಜ ಖ್ಯಾತಿಯನ್ನು ಹೊಂದಿದ್ದು,ಇತ್ತಿತ್ತಲಾಗಿ ಭತ್ತದ ಬೆಳೆ ಕಡಿಮೆಯಾಗಿದೆ.

ಪ್ರಸಕ್ತ ಮುಂಗಾರಿನ ಅತೀಯಾದ ಮಳೆಗೆ ಸೋಯಾ ಹಾಗೂ ಮೆಕ್ಕೆ ಜೋಳ ಬೆಳೆ ಹಾಳಾಗಿದೆ.ಆದರೆ ಭತ್ತದ ಬೆಳೆ ಉತ್ತಮವಾಗಿ ಬಂದಿದ್ದು ರೈತರಪಾಲಿಗೆ ಆಶಾಕಿರಣವಾಗಿದೆ.

Edited By : Manjunath H D
Kshetra Samachara

Kshetra Samachara

11/11/2020 09:32 pm

Cinque Terre

12.51 K

Cinque Terre

0

ಸಂಬಂಧಿತ ಸುದ್ದಿ