ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: 'ಅಭಿವೃದ್ಧಿ ಬಗ್ಗೆ ಹೇಳಿಕೊಳ್ಳಲು ಬಿಜೆಪಿಯವರಿಗೆ ಏನೂ ಇಲ್ಲ, ಅದಕ್ಕೆ ವಕ್ಫ್ ಹಿಂದೆ ಬಿದ್ದಿದ್ದಾರೆ'

ಹಾವೇರಿ: ಬಿಜೆಪಿಯವರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೇಹಾ ಹತ್ಯೆ ಕೇಸ್ ಬಳಸಿಕೊಂಡರು. ಈಗ ವಕ್ಫ್ ವಿಷಯ ಬಳಿಸಿಕೊಂಡು ಚುನಾವಣೆ ಎದುರಿಸುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಆರೋಪಿಸಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕು‌ ಬಂಕಾಪುರದಲ್ಲಿ ಮಾತನಾಡಿದ ಅವರು, ವಕ್ಫ್ ವಿವಾದ ಚುನಾವಣೆ ಮೇಲೆ ಪರಿಣಾಮ ಬೀರುವದಿಲ್ಲ. ವಕ್ಫ್ ನೋಟಿಸ್ ಹಿಂಪಡೆಯುವ ಕೆಲಸ ಈಗಾಗಲೇ ಆಗಿದೆ. ನಾವೂ ರೈತರೇ. ರೈತರಿಗೆ ಅನ್ಯಾಯ ಆಗಲು ಬಿಡುವದಿಲ್ಲ. ಈ ವಿಚಾರದಲ್ಲಿ ನಮ್ಮ ಪಕ್ಷ ಕೂಡಾ ರೈತರಿಗೆ ಅನ್ಯಾಯ ಆಗಲುಬಿಡುವದಿಲ್ಲ ಎಂದು ತಿಳಿಸಿದರು.

ಬಿಜೆಪಿಯವರು ಸೋಮವಾರ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಯಾಕಂದ್ರೆ ಅವರಿಗೆ ಚುನಾವಣೆ ಬಂದ ಸಂದರ್ಭದಲ್ಲಿ ಯಾವುದೇ ಅಸ್ತ್ರ ಇರಲ್ಲ. ಅಭಿವೃದ್ಧಿ ಬಗ್ಗೆ ಹೇಳಿಕೊಳ್ಳಲು ಅವರಿಗೆ ಆಗಲ್ಲ. ಬಿಜೆಪಿಯವರಿಗೆ ಬೇರೆ ಏನೂ‌ ಇಲ್ಲ ಎಂದು ವಿನಯ ಆರೋಪಿಸಿದರು.

Edited By : Ashok M
PublicNext

PublicNext

04/11/2024 08:14 am

Cinque Terre

32.86 K

Cinque Terre

5

ಸಂಬಂಧಿತ ಸುದ್ದಿ