ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ಲೀಸ್ ನನ್ನ ಮಗಳನ್ನು ಕಾಪಾಡಿ, ಸಮಯ ಮೀರುತ್ತಿದೆ - ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಗೆ ಒಳಗಾದ ನರ್ಸ್ ತಾಯಿಯ ಅಳಲು

ನವದೆಹಲಿ; ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಅಪರಾಧಿ ಆಗಿರುವ ಕೇರಳ ಮೂಲದ, ಸದ್ಯ ಯೆಮೆನ್‌ನಲ್ಲಿ ಕೆಲಸ ಮಾಡುತ್ತಿರುವ ನರ್ಸ್ ನಿಮಿಷಾ ಪ್ರಿಯಾ ತಾಯಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಮಯ ಮೀರುತ್ತಿದೆ. ನನ್ನ ಮಗಳ ಜೀವ ಉಳಿಸಲು ಏನಾದ್ರೂ ಮಾಡಿ ಎಂದು ಭಾರತದ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

ಇದಕ್ಕಾಗಿ ವ್ಯಾಪಕ ಪ್ರಚಾರ ಆರಂಭಿಸಿರುವ ನಿಮಿಷಾ ಅವರ ತಾಯಿ ಪ್ರೇಮಕುಮಾರಿ ದಣಿವರಿಯದೇ ಮೊರೆ ಇಡುತ್ತಿದ್ದಾರೆ. ಈಗಾಗಲೇ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಧನ ನೀಡುವ ಕುರಿತು ಮಾತುಕತೆ ಮಾಡಲು ಯೆಮೆನ್ ರಾಜಧಾನಿ ಸನಾಗೆ ಪ್ರೇಂಕುಮಾರಿ ಪ್ರಯಾಣ ಬೆಳೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ನಿಮಿಷಾ ಪ್ರಿಯಾಳನ್ನು ಉಳಿಸಲು ಅಭಿಯಾನ ನಡೆಯುತ್ತಿದೆ.

Edited By : Nagaraj Tulugeri
PublicNext

PublicNext

01/01/2025 10:41 pm

Cinque Terre

204.48 K

Cinque Terre

5