ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2025 ರಲ್ಲಿ ಕೆಪಿಸಿಸಿ ಅಧ್ಯಕ್ಷರು ಚೇಂಜ್ ಆಗ್ತಾರಾ ? ಸಂಪುಟ ಪುನರಚನೆಯಾಗುತ್ತಾ? ಏನ್ ನಡೆಯಲಿದೆ ಕೈ ಪಕ್ಷದಲ್ಲಿ

ಬೆಂಗಳೂರು : 2025 ಹೊಸ ವರ್ಷವನ್ನ ಎಲ್ಲರೂ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡು ಸ್ವಾಗತಿಸುತ್ತಿದ್ದಾರೆ ಹಾಗೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲೂ ಸಾಕಷ್ಟು ನೀರಿಕ್ಷೆಯೊಂದಿಗೆ ವರ್ಷವನ್ನ ಆರಂಭಿಸುತ್ತಿದ್ದಾರೆ. ಈ ವರ್ಷ ಆರಂಭವಾಗ್ತಿದ್ದ ಹಾಗೇ ಕಾಂಗ್ರೆಸ್ ಮನೆಯಲ್ಲಿ ಎರಡು ಪ್ರಮುಖ ವಿಷಯಗಳು ಎದುರಾಗುತ್ತೆ.

ಒಂದು ಕೆಪಿಸಿಸಿ ಅಧ್ಯಕ್ಷರು ಬದಲಾವಣೆಯಾಗುತ್ತಾರಾ ಅನ್ನೋದು. ರಾಜ್ಯ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷರ ಸ್ಥಾನದ ಮೇಲೆ ಸಾಕಷ್ಟು ನಾಯಕರ ಮೇಲೆ ಕಣ್ಣಿದೆ‌ ಈಗ ಸಧ್ಯ ಪವರ್ ಫುಲ್ ಮಿನಿಸ್ಟರ್ ಉಪಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್ ಬಳಿ ಇದೆ ಅವರು ಎರಡ್ಮೂರು ಖಾತೆ ನಿರ್ವಹಣೆ ಜೊತೆ ಕೆಪಿಸಿಸಿಯನ್ನ ನೋಡಿಕೊಳ್ಳುತ್ತಿದ್ದಾರೆ.

ಹೀಗಾಗಿ ಅವರನ್ನ ಬದಲಾವಣೆ ಮಾಡಿ ಬೇರೆಯವರಿಗೆ ಕೊಡಿ ಎಂದು ಒಂದು ಗುಂಪು ಒತ್ತಾಯಿಸುತ್ತಿದೆ. ಆದ್ರಲ್ಲೂ ಇತ್ತಿಚೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿ ಬೇರೆಯವರಿಗೆ ಸ್ಥಾನ ಮಾಡಿಕೊಡಿ ಎಂಬ ಕೂಗು ತುಸು ಜೋರಾಗಿಯೇ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಒನ್ ಮ್ಯಾನ್ ಒನ್ ಪೋಸ್ಟ್ ಎಂಬ ನಿಯಮವಿದೆ ಆ ನಿಯಮದಂತೆ ಡಿಕೆ ಶಿವಕುಮಾರ್ ಈಗ ಮಂತ್ರಿಯಾಗಿದ್ರೆ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಬಿಡಲಿ ಎಂದು ಆಗ್ರಹಿಸುತ್ತಿದ್ದಾರೆ. ವರ್ಷದ ಆರಂಭದಲ್ಲಿ ಸಂಕ್ರಾಂತಿ ಬಳಿಕ ಈ ಕೂಗು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ.

ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೆಎನ್ ರಾಜಣ್ಣ, ಸತೀಶ್ ಜಾರಕಿಹೊಳಿ ಎಂ ಬಿ ಪಾಟೀಲ್ ಸೇರಿದಂತೆ ಕೆಲ ನಾಯಕರು ತೆರೆಯ ಹಿಂದೆ ಮುಂದೆ‌ ಪ್ರಯತ್ನಿಸುತ್ತಿದ್ದಾರೆ. ಏನೇ ಇರಲಿ ಒನ್ ಮ್ಯಾನ್ ಒನ್ ಪೋಸ್ಟ್ ಕಾಂಗ್ರೆಸ್ ನಿಯಮದಂತೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಡಿಕೆಶಿ ಬಿಟ್ಟುಕೊಡ್ತಾರಾ ಅಷ್ಟು ಸುಲಭವಾಗಿ ಕಾದು ನೋಡಬೇಕಿದೆ.

ಇನ್ನೊಂದು ಕಾಂಗ್ರೆಸ್ ಶಾಸಕರು, ಈ ವರ್ಷ ಬಹಳ ಆಸೆಯಿಂದ ಕಾಯುತ್ತಿರೋದು ಸಂಪುಟ ಪುನರಚನೆಯಾಗುತ್ತಾ ಅನ್ನೋದು, ಹಿರಿಯ ಶಾಸಕರು ಮತ್ತು ಕೆಲ ನೂತನ ಶಾಸಕರು ಸಂಪುಟ ಪುನರಚನೆಯಾದ್ರೆ ನಮಗೆ ಏನಾದರೂ ಮಂತ್ರಿ ಸ್ಥಾನ ಸಿಗಬಹುದಾ ಎಂಬ ನಿರೀಕ್ಷೆಯಲ್ಲಿದ್ದಾರೆ.

ಕೆಲ ಮಂತ್ರಿಗಳನ್ನ ಕೈಬಿಟ್ಟು ಹೊಸಬರಿಗೆ ಕೊಡಬೇಕು ಎಂಬ ಚರ್ಚೆ ಪಕ್ಷದಲ್ಲಿ ನಡೆದಿದೆ ಈ ಹಿನ್ನೆಲೆಯಲ್ಲಿ ಸಾಕಷ್ಟು ಶಾಸಕರು ಸಂಪುಟ ಪುನರಚನೆಗಾಗಿ ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಈ ವರ್ಷದ ಬಜೆಟ್ ನಂತರ ಸಂಪುಟಪುನರಚನೆಯಾಗೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಕೆಲ ಸಚಿವರ ಕಾರ್ಯವೈಖರಿ ಮತ್ತು ಕೆಲವರ ಮೇಲೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೆಲ ಸಚಿವರಿಗೆ ಗೇಟ್ ಪಾಸ್ ಕೊಟ್ಟು ಹೊಸಬರನ್ಮ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಲೆಕ್ಕಾಚಾರ ನಡೆಯುತ್ತಿದೆ ಇದಕ್ಕಾಗಿಯೇ ಹೈಕಮಾಂಡ್ ಎಲ್ಲಾ ಸಚಿವರಿಂದ ರಿಪೋರ್ಟ್ ಕಾರ್ಡ್ ಸಹ ತರೆಸಿಕೊಂಡಿದ್ದೆ ಎಲ್ಲಾ ಅಂದುಕೊಂಡ ಹಾಗೇ ನಡೆದರೆ ಸಿದ್ದರಾಮಯ್ಯ ಬಜೆಟ್ ಮಂಡಿಸಿದ ಬಳಿಕ ಸಂಪುಟ ಪುನರಚನೆಯಾಗಲಿದೆ.

ಇದೆಲ್ಲದರ ನಡುವೆ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಸ್ತಾಂತರದ್ದು ಸಹ ಈ ವರ್ಷದ ಅಂತ್ಯಕ್ಕೆ ಚರ್ಚೆಗೆ ಬರುವ ಸಾಧ್ಯತೆ ಇದೆ.

Edited By : Nirmala Aralikatti
PublicNext

PublicNext

01/01/2025 08:28 pm

Cinque Terre

317.87 K

Cinque Terre

0

ಸಂಬಂಧಿತ ಸುದ್ದಿ