ಬೆಂಗಳೂರು : ಸುಪಾರಿ ಕಿಲ್ಲರ್ಸ್ ಕರೆಸಿದ್ದಾರೆ ಎಂಬ ವಿಜಯೇಂದ್ರ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಕೆಂಡಾಮಂಡಲರಾಗಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಬಿ.ವೈ.ವಿಜಯೇಂದ್ರ ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
Who is ಚಂದು ಪಾಟೀಲ್? ಸುಪಾರಿ ಕೊಡುವುದಕ್ಕೆ ನಮಗೆ ಕೆಲಸ ಇಲ್ವಾ? ವಿಜಯೇಂದ್ರ ಸ್ಥಾನಕ್ಕೆ ಗೌರವ ಕೊಡ್ತೀವಿ ಅಂತ ಬಾಯಿಗೆ ಬಂದಂತೆ ಮಾತಾಡಬೇಡಿ. ಸುಪಾರಿ ಕೊಡ್ತೀವಿ ಅಂತ ನಮ್ಮ ಬಗ್ಗೆ ಏನು ಮಾತಾಡೋದು ? ಕಲಬುರಗಿಯಲ್ಲಿ ಸುಪಾರಿ ರಾಜಕೀಯ ಮಾಡಿಕೊಂಡು ಬಂದಿಲ್ಲ ನಾವು, ವಿಜಯೇಂದ್ರದು ಅತಿ ಆಗ್ತಿದೆ ಎಂದು ಕಿಡಿಕಾರಿದರು.
ನಮ್ಮ ತಂದೆಯವರಿಗೆ ಗೌರವ ಕೊಟ್ಟು ನಾನೂ ಸುಮ್ಮನೆ ಇದ್ದೀನಿ, ನಮಗೂ ಮಾತಾಡುವುದಕ್ಕೆ ಬರುತ್ತದೆ, ನಾವು ಬೀದಿಗೆ ಇಳಿದರೆ ನೀವು ಮನೆ ಸೇರಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
PublicNext
04/01/2025 06:54 pm