ನಟಿ ಮಿಲನಾ ನಾಗರಾಜ್ ಅವರು ಸಿನಿಮಾದ ಜೊತೆ ಜೊತೆಗೆ ಮಗಳೊಂದಿಗೆ ಬ್ಯುಸಿಯಾಗಿದ್ದಾರೆ. ಒಂದು ಕಡೆ ತಾಯಿಯಾಗಿ ಮತ್ತೊಂದೆಡೆ ನಟಿಯಾಗಿ ಎರಡನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ.
ಇದೀಗ ಮಗಳ ಜೊತೆಗಿನ ಮುದ್ದಾದ ವಿಡಿಯೋವೊಂದನ್ನು ನಟಿ ಶೇರ್ ಮಾಡಿದ್ದಾರೆ. ಕೃಷ್ಣ ಪುತ್ರಿ ಜನಿಸಿ 4 ತಿಂಗಳು ಕಳೆದಿದೆ. ಇದೇ ಖುಷಿಯಲ್ಲಿ ಮಗಳ ಕ್ಯೂಟ್ ವಿಡಿಯೋವನ್ನು ಹಂಚಿಕೊಂಡು ನಟಿ ಸಂಭ್ರಮಿಸಿದ್ದಾರೆ. ನಿನ್ನ ನಗುವಿನಿಂದ ನಮ್ಮ ಜಗತ್ತು ಬೆಳಗುತ್ತಿದೆ ಎಂದು ನಟಿ ಅಡಿಬರಹ ನೀಡಿದ್ದಾರೆ. ಪರಿಯ ಮುದ್ದಾದ ತುಂಟಾಟವನ್ನು ನೋಡಿ ಫ್ಯಾನ್ಸ್ ಸೋ ಕ್ಯೂಟ್ ಎಂದಿದ್ದಾರೆ.
PublicNext
06/01/2025 07:11 pm