ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಾಕ್ಸಿಕ್ ಸಿನಿಮಾದ ಪೋಸ್ಟರ್ ರಿಲೀಸ್ - ಅಭಿಮಾನಿಗಳು ಫುಲ್ ಖುಷ್

ರಾಕ್ ಸ್ಟಾರ್ ಯಶ್ ಅವರು ಇದೇ ಜ.8ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ದಾರೆ. ಈ ದಿನ ಟಾಕ್ಸಿಕ್ ಚಿತ್ರದ ಬಗ್ಗೆ ಗುಡ್ ನ್ಯೂಸ್ ಕೊಡಲು ಹೊರಟಿದೆ ಚಿತ್ರತಂಡ.

ಯಶ್ ಬರ್ತ್‌ಡೇಯಂದು ಬೆಳಗ್ಗೆ 10:25ಕ್ಕೆ ಗೀತು ಮೋಹನ್‌ ದಾಸ್‌ ನಿರ್ದೇಶನದ ಟಾಕ್ಸಿಕ್ ಬಗ್ಗೆ ಅಪ್‌ ಡೇಟ್ ಸಿಗಲಿದೆ ಎಂದು ಕೆವಿಎನ್ ನಿರ್ಮಾಣ ಸಂಸ್ಥೆ ತಿಳಿಸಿದೆ. ಯಶ್ ಕೂಡ ಇದೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ರಿಲೀಸ್ ಆಗಿರೋ ಪೋಸ್ಟರ್‌ನಲ್ಲಿ ಯಶ್ ಅವರು ಹಳೆಯ ಕಾಲದ ಕಾರಿನ ಮೇಲೆ ನಿಂತಿದ್ದಾರೆ. ಅವರ ಬಾಯಲ್ಲಿ ಸಿಗರೇಟ್ ಇದೆ. ತಲೆಗೆ ಹ್ಯಾಟ್ ಧರಿಸಿದ್ದಾರೆ. ಇದು ಅವರ ಗೆಟಪ್ ಎಂದು ಹೇಳಲಾಗುತ್ತಿದೆ. ಈ ಮೊದಲು ಟೈಟಲ್ ಟೀಸರ್ ಅನೌನ್ಸ್ ಮಾಡುವಾಗಲೂ ಯಶ್ ಅವರು ತಲೆಗೆ ಹ್ಯಾಟ್ ಧರಿಸಿಯೇ ಕಾಣಿಸಿಕೊಂಡಿದ್ದರು. ಇದೇ ಲುಕ್ ಸಿನಿಮಾದಲ್ಲೂ ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಜ.8ರಂದು ಯಶ್ ಲುಕ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Edited By : Suman K
PublicNext

PublicNext

06/01/2025 07:53 pm

Cinque Terre

38.25 K

Cinque Terre

1