ಹಾಲಿವುಡ್ ಸ್ಟಾರ್ ಅನ್ನಿ ಹಾಥ್‌ವೇ, ಫೇಮಸ್ ಚೆಫ್ ವಿಕಾಸ್ ಖನ್ನಾ ಅವರ ನ್ಯೂಯಾರ್ಕ್ ಮೂಲದ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದು, ಇಲ್ಲಿ ಭಾರತೀಯ ಆಹಾರವನ್ನು ಸೇವಿಸಿದ್ದಾರೆ. ಈ ಪ್ರೀತಿಗಾಗಿ ವಿಕಾಸ್ ಖನ್ನಾ, ಅನ್ನಿ ಹಾಥ್‌ವೇಗೆ ನಮ್ಮ ಕರ್ನಾಟಕದ ಹೆಮ್ಮೆಯ ಮೈಸೂರ್ ಸ್ಯಾಂಡಲ್ ಸೋಪ್ ನೀಡಿದ್ದಾರೆ. ಸದ್ಯ ಈ ಫೋಟೋ ಭಾರೀ ವೈರಲ್ ಆಗುತ್ತಿದೆ. ಈ ಬಗ್ಗೆ ವಿಕಾಸ್ ಖನ್ನಾ ಪೋಸ್ಟ್ ಒಂದನ್ನೂ ಹಂಚಿಕೊಂಡಿದ್ದಾರೆ.
ಖನ್ನಾ ಅವರ ರೆಸ್ಟೊರೆಂಟ್‌ನಲ್ಲಿ ಹ್ಯಾಥ್‌ವೇ ಕೆಲವು ರುಚಿಕರವಾದ ಭಾರತೀಯ ಆಹಾರವನ್ನು ಸೇವಿಸಿದರು. ಇನ್ನು ಹಾಥ್‌ವೇ ಖನ್ನಾ ಅವರ ರೆಸ್ಟೋರೆಂಟ್‌ಗೆ ಆಗಮಿಸಿದಕ್ಕಾಗಿ, ಅವರಿಗೆ ವಿಕಾಸ್ ಮೈಸೂರು ಸ್ಯಾಂಡಲ್ ಸೋಪ್ ಮತ್ತು ಆಗ್ರಾದ ಕರಕುಶಲ ಅಮೃತಶಿಲೆಯ ಪೆಟ್ಟಿಗೆಯೊಂದಿಗೆ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದರು. ಮೈಸೂರು ಸ್ಯಾಂಡಲ್ ಸೋಪ್ ನೀಡಿರುವುದು ಮತ್ತಷ್ಟು ಪ್ರಶಂಸೆಗೆ ಪಾತ್ರವಾಗಿದೆ ಮತ್ತು ಕರ್ನಾಟಕಕ್ಕೂ ಹೆಮ್ಮೆ ಎಂಬಂತಾಗಿದೆ.
ಇನ್ನು ಸಚಿವ ಎಂ.ಬಿ.ಪಾಟೀಲ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಖ್ಯಾತ ಬಾಣಸಿಗ ಶ್ರೀ ವಿಕಾಸ್ ಖನ್ನ ಅವರು ಮಾರ್ಬಲ್ ಬಾಕ್ಸ್ ನಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಇರಿಸಿ ಅಮೆರಿಕದ ಖ್ಯಾತ ನಟಿ #AnneHathaway ಅವರಿಗೆ ಉಡುಗೊರೆ ನೀಡಿ ನಮ್ಮ ಭವ್ಯ ಪರಂಪರೆಯನ್ನು ಪ್ರಪಂಚದ ಮುಂದೆ ಪ್ರತಿಷ್ಠಾಪಿಸಿದ್ದಾರೆ!
ಇತ್ತೀಚೆಗೆ ಖ್ಯಾತ ಉದ್ಯಮಿ ಶ್ರೀ ಆನಂದ್ ಮಹೀಂದ್ರ ಅವರು ಮೈಸೂರು ಸ್ಯಾಂಡಲ್ ಸೋಪಿನ ವಿಶೇಷತೆಯನ್ನು ಒತ್ತಿಹೇಳುವ ವೀಡಿಯೊವನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿದ್ದರು. #ನಮ್ಮ ಸರಕಾರದ ಅವಧಿಯಲ್ಲಿ #KSDL ನ ಸಮರ್ಥ ನಿರ್ವಹಣೆಯಿಂದ ದಾಖಲೆಯ ಲಾಭಗಳಿಸುವುದರ ಜೊತೆಗೆ ರಾಜ್ಯದ ಸಾಂಸ್ಕೃತಿಕ ಹೆಮ್ಮೆ ಜಗತ್ತಿನೆಲ್ಲೆಡೆ ಹರಡುತ್ತಿರುವುದು ನಿಜಕ್ಕೂ ಗೌರವ ಹಾಗೂ ಸಂತಸದ ವಿಷಯವಾಗಿದೆ.
PublicNext
04/01/2025 04:30 pm