ಹಾವೇರಿ: ಹೊಸ ವರ್ಷ ಮತ್ತು ಸಂಕ್ರಾಂತಿ ಅಂಗವಾಗಿ ಹಾವೇರಿಯಲ್ಲಿ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಹಾವೇರಿ ಜಿಲ್ಲೆಯಲ್ಲಿ ಇದುವರೆಗೂ ಸಾವನ್ನಪ್ಪಿದ ಕೊಬ್ಬರಿ ಹೋರಿಗಳ ಸವಿನೆನಪಿಗಾಗಿ ಗಾಡಾ ಸ್ಫರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಹಾವೇರಿ, ಬೆಳಗಾವಿ ಮಹಾರಾಷ್ಟ್ರ ಸೇರಿದಂತೆ ವಿವಿಧಡೆಯಿಂದ ಆಗಮಿಸಿದ್ದ ೫೦ ಕ್ಕೂ ಅಧಿಕ ಎತ್ತುಗಳು ಪಾಲ್ಗೊಂಡಿದ್ದವು.
ಕಡಿಮೆ ಅವಧಿಯಲ್ಲಿ ಅತ್ಯಧಿಕ ದೂರ ಚಲಿಸಿದ ಹೋರಿಗಳಿಗೆ ಬಹುಮಾನ ನಿಗದಿ ಮಾಡಲಾಗಿತ್ತು. ಪ್ರಥಮ ಬಹುಮಾನ ಎರಡು ಬೈಕ್ ಮತ್ತು ಬಂಗಾರ ಹಣವನ್ನು ಬಹುಮಾನ ರೂಪವಾಗಿ ರೈತರಿಗೆ ನೀಡಲಾಯಿತು. ಎತ್ತುಗಳು ವಿಶಿಲ್ ಸೌಂಡ್ ಆಗುತ್ತಿದ್ದಂತೆ ನಾಗಾಲೋಟದಲ್ಲಿ ಓಡಿದವು. ನೋಡನೋಡುತ್ತಿದ್ದಂತೆ ಮಿಂಚಿ ಮರೆಯಾದವು. ಎತ್ತುಗಳ ಓಟ ನೋಡುಗರ ಎದೆ ಝಲ್ಲೆನಿಸುವಂತಿತ್ತು. ಧೂಳೆಬ್ಬಿಸಿ ಓಡುತ್ತಿದ್ದ ಎತ್ತುಗಳ ಓಟ ನೋಡುಗರನ್ನ ರೋಮಾಂಚನಕಾರಿಯಾಗಿಸಿತು.
PublicNext
02/01/2025 10:22 am