ಹಾವೇರಿ : ಹಿಂದು ಧರ್ಮದ ಬಾಲಕಿಯನ್ನ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವ ವಿಫಲ ಯತ್ನ ಹಾವೇರಿಯಲ್ಲಿ ನಡೆದಿದೆ. ಮತಾಂತರಕ್ಕೆ ಪುಸಲಾಯಿಸಿದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳನ್ನ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ 28 ವರ್ಷದ ಮೆಹಬೂಬಅಲಿ ಬಾಬುಸಾಬ್ ನದಾಫ್ ಹಾಗೂ ಆತನ ಸ್ನೇಹಿತ 20 ವರ್ಷದ ಸೋಯೆಲಸಾಬ ಖಾಸೀಮಸಾಬ ಮೆಳ್ಳಳ್ಳಿ ಎಂದು ಗುರುತಿಸಲಾಗಿದೆ.
ಆರೋಪಿ ಮೆಹಬೂಬಅಲಿ ಬಾಲಕಿಗೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗು, ಇಲ್ಲಾ ನಿನ್ನನ್ನು ಓಡಿಸಿಕೊಂಡು ಹೋಗಿ ಮದುವೆಯಾಗುತ್ತೇನೆ ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಲೈಂಗಿಕ ದೌರ್ಜನ್ಯ ಎಸಗಿ ಮತಾಂತರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಮೆಹಬೂಬಅಲಿ ಸೋಯೆಲಸಾಬ್ ಆರೋಪಿಗಳ ವಿರುದ್ಧ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
01/01/2025 06:18 pm