ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಭಾವೈಕ್ಯತೆ ನಾಡಿನಲ್ಲಿ ಸಂಭ್ರಮದ ಈದ್-ಮಿಲಾದ್ ಆಚರಣೆ

ಗದಗ: ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರ ಜನ್ಮ ದಿನವಾದ ಈದ್‌ ಮಿಲಾದುನ್ನಬಿಯನ್ನು ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ರವಿವಾರ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.

ಸ್ಥಳೀಯ ದೂದ್ ನಾನಾ ದರ್ಗಾದಿಂದ ಆರಂಭಗೊಂಡ ಬೃಹತ್‌ ಮೆರವಣಿಗೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಬಸ್ ನಿಲ್ದಾಣದಿಂದ ಪುನಃ ದೂದ್ ನಾನಾ ದರ್ಗಾದ ಆವರಣದಲ್ಲಿ ಸಮಾರೋಪಗೊಂಡಿತು.

ಮೆರವಣಿಗೆಯಲ್ಲಿ ಬೃಹತ್‌ ಧ್ವಜ ಹಿಡಿದು ಭಾರಿ ಪ್ರಮಾಣದ ಧ್ವನಿ ವರ್ಧಕಗಳನ್ನು ಅಳವಡಿಸಿದ ವಾಹನಗಳು ಶೃಂಗಾರಗೊಂಡು ಮೆರವಣಿಗೆಯಲ್ಲಿ ಸಾಗಿದವು. ಮುಸ್ಲಿಂರೆಲ್ಲ ಪೈಗಂಬರ್‌ ಮೊಹಮ್ಮದರ ತತ್ವಾದರ್ಶಗಳ ಘೋಷಣೆ ಕೂಗಿದರು. ಪೈಗಂಬರರು ಲೋಕಕ್ಕೆ ಸಾರಿದ ತತ್ವ ಹಾಗೂ ಸನ್ಮಾರ್ಗಗಳ ಸಂದೇಶ ಹೊಂದಿದ ಹಾಡುಗಳನ್ನು ಹಾಡಿದರು.

ಮೆರವಣಿಗೆಯಲ್ಲಿ ಯುವಕರು ಶ್ವೇತ ಬಣ್ಣದ ಬಟ್ಟೆ ಧರಿಸಿ ಪ್ರವಾದಿಯವರ ಸಂದೇಶವನ್ನು ಪರಿಪಾಲಿಸುವ ಸಂಕಲ್ಪ ಮಾಡಿದರು. ಅಲ್ಲದೇ ಸತ್ಯ, ಧರ್ಮದ ಸಂದೇಶವನ್ನು ಸಾರಿ ಹೇಳಲಾಯಿತು. ಪೈಗಂಬರರು ಲೋಕಕ್ಕೆ ಸಾರಿದ ಪ್ರೀತಿ, ವಿಶ್ವಾಸ, ಆತ್ಮೀಯತೆ, ಪರಧರ್ಮ ಸಹಿಷ್ಣುತೆ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರತಿಜ್ಞೆ ಮಾಡಿದರು.

Edited By : PublicNext Desk
Kshetra Samachara

Kshetra Samachara

09/10/2022 06:10 pm

Cinque Terre

8.5 K

Cinque Terre

0

ಸಂಬಂಧಿತ ಸುದ್ದಿ