ಬನಹಟ್ಟಿ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನೂರಾರು ಯೋಜನೆಗಳನ್ನು ಜಾರಿಗೆ ತರುತ್ತವೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಯೋಜನೆಗಳು ಅಪೂರ್ಣವಾಗುತ್ತವೆ ಎನ್ನುವುದಕ್ಕೆ ಬನಹಟ್ಟಿ ಗ್ರಾಮ ಪಂಚಾಯತಿಯೇ ಸಾಕ್ಷಿ ಎನ್ನುವ ಹಾಗೆ ಆಗಿದೆ ಅಲ್ಲಿನ ಗ್ರಾಮಸ್ಥರ ಬದುಕು.
ಹೌದು... ಎರಡು ವರ್ಷಗಳ ಹಿಂದೆ ಗ್ರಾಮ ವಾಸ್ತವ್ಯ ಎಂಬ ಕಾರ್ಯಕ್ರಮದಲ್ಲಿ ತಾಲ್ಲೂಕು ತಹಶೀಲ್ದಾರರು, ಜಿಲ್ಲಾಧಿಕಾರಿಗಳು ಗ್ರಾಮದಲ್ಲಿ ಜನರೊಂದಿಗೆ ಒಂದು ದಿನದ ವಾಸ್ತವ್ಯ ಯೋಜನೆ ಜಾರಿಗೆ ತಂದಿದ್ದರು. ಅದರಲ್ಲಿ ಬನಹಟ್ಟಿ ಗ್ರಾಮ ಪಂಚಾಯತಿಯೂ ಒಂದು.
ಈ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಆಗಿನ ತಹಶೀಲ್ದಾರ್ ಎ.ಡಿ.ಅಮರವಾದಿಗಿ ಅವರು ಗ್ರಾಮಕ್ಕೆ ಗಟಾರ ನಿರ್ಮಾಣ ಮಾಡಲು ಭೂಮಿ ಪೂಜೆ ಸಹ ಮಾಡಿದ್ದರು. ಆದರೆ, ಭೂಮಿ ಪೂಜೆ ಮಾಡಿದ ಈ ಕಾಮಗಾರಿ ಇದುವರೆಗೂ ಸಹ ನಡೆದಿಲ್ಲ! ಬನಹಟ್ಟಿ ಗ್ರಾಮ ಪಂಚಾಯತಿಯ ಅಧ್ಯಕ್ಷ- ಉಪಾಧ್ಯಕ್ಷರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ದಿಂದು ಗಟಾರ ನಿರ್ಮಾಣವಾಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
PublicNext
15/12/2024 08:55 am