ಲಕ್ಷ್ಮೇಶ್ವರ: ಪ್ರತಿ ದಿನವೂ ನಾವು ಶಾಲೆಗೆ ಹೋಗಿ ಪಾಠ ಕೇಳುವುದಕ್ಕಿಂತ ಬಸ್ ಗಾಗಿ ಕಾಯುವುದೇ ಹೆಚ್ಚಾಗಿದೆ. ಅದರಲ್ಲಿಯೂ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಬಸ್ಸಿನಲ್ಲಿ ಪ್ರಯಾಣ ಮಾಡುವ ಮಹಿಳೆಯರ ಪ್ರಮಾಣ ಹೆಚ್ಚಾಗಿದೆ. ಇದರಿಂದಾಗಿ ನಮಗೆ ಶಾಲಾ- ಕಾಲೇಜಿಗೆ ತೆರಳಲು ತುಂಬಾ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು.
ಪ್ರತಿ ದಿನದಂತೆ ಇಂದು ಕೂಡಾ ಬಸ್ಸಿಗಾಗಿ ಕಾದು ಸುಸ್ತಾದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿ ದಿಢೀರ್ ಲಕ್ಷ್ಮೇಶ್ವರ ನಗರದಲ್ಲಿ ಹಾದು ಹೋಗುವ ಪಾಳ- ಬಾದಾಮಿ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
4 ಘಂಟೆಗೆ ಬರುವ ಬಸ್ 7 ಘಂಟೆ ಆದರೂ ಬಾರದೇ ಇರುವ ಕಾರಣ ಹಾಗೂ ಸಾರಿಗೆ ಇಲಾಖೆ ನಿರ್ಲಕ್ಷ್ಯಕ್ಕೆ ಬೇಸತ್ತು ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರತಿಭಟನೆ ದಾರಿ ಹಿಡಿದರು. ಅಲ್ಲದೆ, ಸಾರಿಗೆ ಇಲಾಖೆಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
-ಗೌರೀಶ ನಾಗಶೆಟ್ಟಿ, ಪಬ್ಲಿಕ್ ನೆಕ್ಸ್ಟ್ ಲಕ್ಷ್ಮೇಶ್ವರ
PublicNext
06/12/2024 10:10 pm