ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಬೆಳೆ ಹಾನಿ ಪರಿಹಾರಕ್ಕೆ ರೈತರ ಮನವಿ

ಗದಗ : ಅಕಾಲಿಕ ಮಳೆಯಿಂದಾಗಿ ನೀಲಗುಂದ ಗ್ರಾಮದ ವ್ಯಾಪ್ತಿಯಲ್ಲಿ ಗೋವಿನ ಜೋಳ,ಮೆಣಸಿನಕಾಯಿ,ಗೋದಿ ಹಾಗೂ ಕಡಲೆ ಬೆಳೆಗಳು ತೀವ್ರ ಹಾನಿಗೇಡಾಗಿದ್ದು, ರೈತರಿಗೆ ಆರ್ಥಿಕ ನಷ್ಟವಾಗಿದೆ. ಕೂಡಲೆ ಸರ್ಕಾರ ರೈತರಿಗೆ ಬೆಳೆಹಾನಿ,ಬೆಳೆ ವಿಮಾ ಪರಿಹಾರ ಒದಗಿಸಬೇಕು. ನಷ್ಟ ಅನುಭವಿಸಿದ ರೈತರಿಗೆ ನೆರವಾಗಬೇಕು. ಎಂದು ನೀಲಗುಂದ ಗ್ರಾಮದ ರೈತರು ಗದಗ ಜಿಲ್ಲಾಧಿಕಾರಿ ಗೋವಿಂದರಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ವಿನಯ್ ಬಂಗಾರಿ,ರೈತರಾದ ಕುಭೇರಡ್ಡಿ ಬಂಗಾರಿ, ಸುನೀಲ ಪಾಟೀಲ,ಬಸಪ್ಪ ಪೂಜಾರ,ಬಸವರಾಜ ಮರಿಲಿಂಗಪ್ಪನವರ,ಮಂಜು ಗೋಕಾವಿ, ಕಾರ್ತಿಕ ಬಂಗಾರಿ, ಹರ್ಷ ಬಂಗಾರಿ,ದೇವರಾಜ ಕಂಪ್ಲಿ,ನಿಂಗಪ್ಪ ದೇವಜಿ,ರವಿ ಗೋಕಾವಿ ಮೊದಲಾದವರು ಇದ್ದರು.

Edited By : PublicNext Desk
PublicNext

PublicNext

12/12/2024 04:22 pm

Cinque Terre

4.92 K

Cinque Terre

0