ಗದಗ: ಭಾರತದಲ್ಲಿ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಅನ್ನು ಸರ್ಕಾರವು ಕಡ್ಡಾಯಗೊಳಿಸಿದೆ. ಹುಟ್ಟಿದ ಮಗುವಿನಿಂದ ಪ್ರತಿಯೊಬ್ಬರಿಗೂ ಆಧಾರ ಬಹು ಅವಶ್ಯವಾಗಿದ್ದು, ಆಧಾರ ಕಾರ್ಡ್ ಬಹಳ ಮುಖ್ಯವಾಗಿ ದಾಖಲೆಯಾಗಿದೆ.
ಯಾವುದರೂ ಯೋಜನೆಯನ್ನು ಪಡೆಯಬೇಕಾದರೆ ಹಾಗೂ ನಮ್ಮನ್ನು ಗುರುತಿಸಲು ಏನೇ ಕಾರ್ಯವನ್ನು ಮಾಡಲು ಈಗ ಆಧಾರ ಬಹು ಪ್ರಾಮುಖ್ಯತೆ ಹೊಂದಿದೆ. ಇದರಿಂದ ಸರ್ಕಾರ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಮಗು ಜನದಿಂದ 6 ವರ್ಷದೊಳಗಿನ ಮಕ್ಕಳಿಗೆ ಬಾಲ್ ಆಧಾರ ಕಾರ್ಡ್ ಎಂದು ನೀಡಲಾಗುತ್ತಿದ್ದು, ಇದು ಸಹ ಈಗ ಕಡ್ಡಾಯವಾಗಿದೆ ಈ ಹಿಂದೆ ಆಧಾರ ಕಾರ್ಡ್ ಮಾಡಿಸಲು ಪೋಷಕರು ಮಕ್ಕಳನ್ನು ಕರೆದುಕೊಂಡು ಆಧಾರ ಕೇಂದ್ರಗಳಲ್ಲಿ ಅಲೆದಾಡಿದರು ಆಧಾರ ಕಾರ್ಡ್ ಮಾಡಿಸಲು ಆಗುತ್ತಿರಲಿಲ್ಲ ಇದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಂಚೆ ಇಲಾಖೆ ವತಿಯಿಂದ ಬಾಲ ಆಧಾರ್ ಕ್ಯಾಂಪ್ ಮಾಡುವ ಕಾರ್ಯ ಚುರುಕುಗೊಂಡಿದೆ.
ಬಾಲ್ ಆಧಾರ್ ಕಾರ್ಡ್ ಜಿಲ್ಲೆಯ ಆಯ್ದು ಅಂಗನವಾಡಿ ಕೇಂದ್ರಗಳಲ್ಲಿ ಅಂದರೆ ಅತಿ ಹೆಚ್ಚು ಮಕ್ಕಳು ಇರುವ ಅಂಗನವಾಡಿ ಕೇಂದ್ರದಲ್ಲಿ ಆಧಾರ ಕಾರ್ಡ ಮಾಡುವ ಕಾರ್ಯವನ್ನು ಅಂಚೆ ಇಲಾಖೆಯ ಸಿಬ್ಬಂದಿಗಳ ಸಹಯೋಗದಲ್ಲಿ ಮಾಡಲಾಗುತ್ತಿದ್ದು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು ಮಕ್ಕಳ ಪೋಷಕರಿಗೆ ಪೋನ್ ಮೂಲಕ ಕರೆ ಮಾಡಿ ಮತ್ತು ಮನೆ ಮನೆಗೆ ಭೇಟಿ ನೀಡಿ ಆಧಾರ ಕಾರ್ಡ್ ಮಾಡಿಸುವ ಕುರಿತು ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತಿದ್ದರೆ ಅಂಚೆ ಇಲಾಖೆಯ ಸಿಬ್ಬಂದಿಗಳು ಬಾಲ್ ಆಧಾರ ಕಾರ್ಡ್ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಈಗ ಆಯ್ದು ಅಂಗನವಾಡಿ ಕೇಂದ್ರಗಳಲ್ಲಿ ಈ ಕ್ಯಾಂಪ್ ಮಾಡಲಾಗಿದ್ದು,ಮುಂದೆ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಬಾಲ ಆಧಾರ ಕಾರ್ಡ್ ಮಾಡುವುದನ್ನು ಮಾಡುವ ಯೋಜನೆಯನ್ನು ಹಾಕಲಾಗಿದೆ ಇದನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಹಿತಿ ನೀಡಿದೆ.
ಬಾಲ್ ಆಧಾರ್ ಕಾರ್ಡ್ ಮಾಡಲು ಬೇಕಾಗುವ ದಾಖಲೆಗಳು
ಮಗುವಿನ ಜನನ ಪ್ರಮಾಣಪತ್ರ, ಮಗುವಿನ ಫೋಟೋ ಪಡೆಯಲಾಗುತ್ತದೆ. ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್ ಅನ್ನು ಬಾಲ್ ಆಧಾರ್ ಕಾರ್ಡ್ಗೆ ಲಿಂಕ್ ಮಾಡಲಾಗುತ್ತದೆ. ಬಳಿಕ ಬಾಲ್ ಆಧಾರ್ ಕಾರ್ಡ್ಗೆ ಲಿಂಕ್ ಆದ ಪೋಷಕರ ಆಧಾರ್ ಕಾರ್ಡ್ನಲ್ಲಿರುವ ಮೊಬೈಲ್ ನಂಬರಗೆ ನೋಟಿಫಿಕೇಶನ್ ಬರುತ್ತದೆ. ಸ್ವಲ್ಪ ದಿನದ ಬಳಿಕ ಬಾಲ್ ಆಧಾರ್ ಕಾರ್ಡ್ ಅನ್ನು ನೊಂದಾಯಿತ ವಿಳಾಸಕ್ಕೆ ಪೋಸ್ಟ್ ಮೂಲಕ ಕಳುಹಿಸಿಕೊಡಲಾಗುತ್ತದೆ. ಇದಕ್ಕೆ ಬೆರಳಚ್ಚು (ಫಿಂಗರ್) ಪ್ರಿಂಟ್, ಕಣ್ಣಿನ (ಐರಿಸ್)ಸ್ಕ್ಯಾನ್, ಫೋಟೋ ಇತ್ಯಾದಿ ಅನ್ನು ಆ ವೇಳೆ ಪಡೆಯಲಾಗುವುದಿಲ್ಲ ಐದು ವರ್ಷ ದಾಟಿದ ಬಳಿಕ ಅಪ್ಡೇಟ್ ಮಾಡಬೇಕಾಗುತ್ತದೆ ಸಣ್ಣ ಮಕ್ಕಳಿಗೆ ಬಾಲ್ ಆಧಾರ್ ಕಾರ್ಡ್ ನೀಡಲಾಗುತ್ತದೆ ಇದನ್ನು ಉಚಿತವಾಗಿ ಮಾಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟಾರೆ 0 ದಿಂದ 6 ವರ್ಷದೊಳಗಿನ ವಯಸ್ಸಿನ ಸುಮಾರು 59 ಸಾವಿರ ಮಕ್ಕಳ ಬಾಲ್ ಆಧಾರ ಇಲ್ಲದೆ ಇರುವ ಮಕ್ಕಳು ಇದ್ದು, ಗದಗ ಜಿಲ್ಲೆಯಲ್ಲಿ 8 ಆಧಾರ್ ಕಾರ್ಡ್ ಕ್ಯಾಂಪ್ ಮಾಡಲಿದ್ದು, ಬಾಲ್ ಆಧಾರ ಕಾರ್ಡ್ ಮಾಡುವ ಕಾರ್ಯವನ್ನು ಡಿ.6 ರಿಂದ ಪ್ರಾರಂಭ ಮಾಡಲಾಗಿದ್ದು, ಅಂಚೆ ಇಲಾಖೆಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಮಾಡಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಪೋಷನ್ ಅಭಿಯಾನ ಯೋಜನೆ ಜಾರಿಯಲ್ಲಿದ್ದು, ಪೋಷನ್ ಟ್ರ್ಯಾಕರ್ ಮೂಲಕ ಮಕ್ಕಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರ ಮೊಬೈಲ್ ಫೋನ್ ನಲ್ಲಿ ಪೋಷನ್ ಟ್ರ್ಯಾಕರ್ ಮೂಲಕ 22.0 ಆವೃತ್ತಿ ಇದ್ದು ಇದರ ಮೂಲಕ 6 ರಿಂದ 3 ವರ್ಷದ ಮಕ್ಕಳ ಮನೆಗೆ ರೇಷನ್ ನೀಡುವುದಕ್ಕೆ ನಿಜವಾದ ಫಲಾನುಭವಿ ಗುರುತಿಸಲು ಮಗುವಿನ ಸ್ವಂತ ಆಧಾರ್ ಕಾರ್ಡ್ ಇದ್ದರೆ ಆಹಾರ ವಿತರಣೆಯ ನೇರವಾಗಿ ಬಟನ್ ಕ್ಲಿಕ್ ಮಾಡಲು ಅವಕಾಶವಿದೆ ಆದ್ದರಿಂದ ಪ್ರತಿ 0-5 ವರ್ಷದ ಮಗುವಿನ ಆಧಾರ್ ಕಾರ್ಡ್ ಅವಶ್ಯಕವಾಗಿರುತ್ತದೆ.
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಅಂಗನವಾಡಿ ಕೇಂದ್ರ ಸಂಖ್ಯೆ 48 ರಲ್ಲಿ ಆಧಾರ ಕಾರ್ಡ್ ಕ್ಯಾಂಪ್ ಸಿಡಿಪಿಓ ಮೃತ್ಯುಂಜಯ ಗುಡ್ಡದಾನ್ವೇರಿ, ಅಂಗನವಾಡಿ ಮೇಲ್ವಿಚಾರಕಿ ನಂದಾ ನವಲೆ, ತಾಲೂಕ ಪೋಷಣ ಸಂಯೋಜಕರು ಆನಂದ ಕೊಡ್ಲಿ ಅವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಇವರಿಗೆ ಅಂಚೆ ಇಲಾಖೆಯ ಬ್ರಾಂಚ್ ಪೋಸ್ಟ್ ಮಾಸ್ಟರ್ ಸರಸ್ವತಿ, ಮೇಘಾ, ಪೂಜಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ನಾಗಲಕ್ಷ್ಮಿ ಕುಲಕರ್ಣಿ, ಮಂಜುಳಾ ಚರ್ತದ, ಶೀಲಾ ಗೋಜನೂರು, ನಿರ್ಮಲಾ ಪಶುಪತಿಹಾಳ, ಲಕ್ಷ್ಮಿ ನವಲಿ, ವಿಜಯಲಕ್ಷ್ಮಿ ನವಲಗುಂದ ಸೇರಿದಂತೆ ಅನೇಕರು ಸಾಥ್ ನೀಡುತ್ತಿದ್ದಾರೆ.
Kshetra Samachara
10/12/2024 01:30 pm