ಗದಗ: ನಗರದ ಚನ್ನಮ್ಮ ಸರ್ಕಲ್ ಬಳಿ ಹಾಡಹಗಲೇ ನಡುಬೀದಿಯಲ್ಲಿ ಇಬ್ಬರು ವ್ಯಕ್ತಿಗಳು ಚಾಕು ಸಮೇತ ಹೊಡೆದಾಡಿಕೊಂಡಿದ್ದಾರೆ. ಭೀಬತ್ಸ ಘಟನೆ ನೋಡಿದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಹಣಕಾಸಿನ ವಿಚಾರವಾಗಿ ಫಕೀರೇಶ ನಂದಿಹಳ್ಳಿ ಹಾಗೂ ಗಂಗಾಧರ ಎಂಬಾತರ ನಡುವೆ ವಾಗ್ವಾದ ನಡೆದು, ವಿಕೋಪಕ್ಕೆ ಹೋಗಿದೆ. ಆಗ ಫಕ್ಕೀರೇಶನ ಕುತ್ತಿಗೆಗೆ ಚಾಕುವಿನಿಂದ ಗಂಗಾಧರ ಇರಿದಿದ್ದಾನೆ ಎನ್ನಲಾಗಿದೆ.
ನಗರದ ಹುಡ್ಕೋ ಕಾಲೋನಿ ನಿವಾಸಿಗಳು ಎನ್ನಲಾದ ಈ ಇಬ್ಬರು ಪೊಲೀಸರ ಭಯವೇ ಇಲ್ಲದೇ ಹೊಡೆದಾಡಿದ್ದಾರೆ. ಫಕೀರೇಶನಿಗೆ ಗಂಭೀರ ಗಾಯಗಳಾಗಿವೆ. ಆತನನ್ನು ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಗಂಗಾಧರನನ್ನು ಪೋಲಿಸರು ವಶಕ್ಕೆ ಪಡೆದು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೌರೀಶ ನಾಗಶೆಟ್ಟಿ ಪಬ್ಲಿಕ್ ನೆಕ್ಸ್ಟ್ ಗದಗ
PublicNext
11/12/2024 10:57 am