ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಸ್ಲಂ ನಿವಾಸಿಗಳಿಂದ ಡಿಸೆಂಬರ್ 13ರಂದು ಸುವರ್ಣಸೌಧದ ಮುಂದೆ ಪ್ರತಿಭಟನೆ

ಗದಗ: ಸ್ಲಂ ನಿವಾಸಿಗಳ ವಿವಿಧ ಬೆಡಿಕೆ ಈಡೆರಿಕೆಗೆ ಆಗ್ರಹಿಸಿ ಹಾಗೂ ವಸತಿ ಜಮ್ಮಿರ್ ಅಹ್ಮದ್ ರನ್ನು ಸಚಿವ ಸಂಪುಟದಿಂದ ಕೈ ಬಿಡುವಂತೆ ಬೆಳಗಾವಿಯ ಸುವರ್ಣಸೌಧದ ಮುಂದೆ ಡಿಸೆಂಬರ್ 13ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಜನ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಗದಗ ಜಿಲ್ಲೆಯಿಂದ ನೂರಕ್ಕೂ ಹೆಚ್ಚು ಜನ ತೆರಳಲಿದ್ದೇವೆ ಎಂದು ಜಿಲ್ಲಾಧ್ಯಕ್ಷ ಇನ್ತಿಯಾಜ್ ಮಾನ್ವಿ ಹೇಳಿದರು. ಕಳೆದ ಎರಡು ವರ್ಷಗಳಿಂದ ಸ್ಲಂ ನಿವಾಸಿಗಳಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ನಿವಾಸಿಗಳ ಹಿತ ಕಾಪಾಡಬೇಕು ಅಂತ ಇಂತಿಯಾಜ್ ಮಾನ್ವಿ ಆಗ್ರಹಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

Edited By : PublicNext Desk
Kshetra Samachara

Kshetra Samachara

10/12/2024 01:38 pm

Cinque Terre

16.14 K

Cinque Terre

0

ಸಂಬಂಧಿತ ಸುದ್ದಿ