ಗದಗ : ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಸರ್ಕಾರಿ ಹಿರಿಯ ಮಾದರಿ ಕನ್ನಡ ಹೆಣ್ಣುಮಕ್ಕಳ ಶಾಲೆ ಮತ್ತು ಲಕ್ಷೇಶ್ವರದ ಗುರು ಬಳಗದ ವತಿಯಿಂದ ಸಾಧಕರನ್ನು ಸನ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಶಿಕ್ಷಕ ಬಿ.ಎಂ. ಕುಂಬಾರ,ಯಾವುದೇ ಕ್ಷೇತ್ರ ಇರಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಪ್ರಶಸ್ತಿಗಳು ಹುಡುಕಿ ಬರುತ್ತವೆ. ಈ ನಿಟ್ಟಿನಲ್ಲಿ ಈ ಬಾರಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಎಚ್.ಡಿ. ನಿಂಗರೆಡ್ಡಿ, ಎ.ಎಫ್. ನೀಲಗುಂದ ಮತ್ತು ಉತ್ತಮ ಎನ್‌ಎಸ್‌ಎಸ್ ಅಧಿಕಾರಿ ಸೋಮಶೇಖರ ಕೆರಿಮನಿ ಅವರನ್ನು ಸನ್ಮಾನಿಸುತ್ತಿರುವುದು ಶ್ಲಾಘನೀಯ' ಎಂದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಿ.ಎಚ್. ಪಾಟೀಲ ಅಧ್ಯಕ್ಷತೆವಹಿಸಿದ್ದರು.
ಪೂರ್ಣಾಜಿ ಖರಾಟೆ, ಡಯಟ್‌ನ ಎಸ್.ಕೆ. ಹವಾಲ್ದಾರ, ಚಂದ್ರು ನೇಕಾರ, ಶಿಕ್ಷಣ ಸಂಯೋಜಕ ಹರೀಶ, ಬಿ.ಎಸ್. ಈಳಿಗೇರ ಇದ್ದರು. ಸತೀಶ ಬೋಮಲೆ ಸ್ವಾಗತಿಸಿದರು. ಎನ್.ಎನ್. ಶಿಗ್ಲಿ ನಿರೂಪಿಸಿದರು. ಆರ್. ಎಂ. ಶಿರಹಟ್ಟಿ ವಂದಿಸಿದರು.
Kshetra Samachara
25/09/2022 05:00 pm