ಚಳ್ಳಕೆರೆ : ಯಾವಾಗಲು ಮಕ್ಕಳು ಕಿರಿಚಾಡುವ ಶಬ್ದ, ಪೋಷಕರು ಮಕ್ಕಳೊಂದಿಗೆ ಸರದಿ ಸಾಲಿನಲ್ಲಿ ನಿಲ್ಲುವ ದೃಶ್ಯ, ಜನ ದಟ್ಟಣೆಯಿಂದ ಕೂಡಿರುವ ಸ್ಥಳ ಸದ್ಯ ವೈದ್ಯರಿಲ್ಲದೆ ಬಿಕೋ ಎನ್ನುತ್ತಿದೆ.
ಹೌದು, ಇದು ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞಾ ಡಾ.ತಿಪ್ಪೇಸ್ವಾಮಿ ಜೂನ್ 5 ರಂದು ವಯೋ ನಿವೃತ್ತಿಹೊಂದಿ ಸುಮಾರು ಮೂರು ತಿಂಗಳು ಕಳೆದರೂ ಮಕ್ಕಳ ತಜ್ಞ ವೈದ್ಯರ ನೇಮಕಾತಿಯಾಗದೆ ಇರುವುದರಿಂದ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ವೈದ್ಯರಿಲ್ಲದೇ ಸುತ್ತಮುತ್ತಲಿನ ಗ್ರಾಮದ ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಸಾರ್ವಜನಿಕ ಆಸ್ಪತ್ರೆಗೆ ನೆರೆಯ ಆಂದ್ರ ಪ್ರದೇಶದಿಂದಲೂ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆಚಿಕಿತ್ಸೆಗೆ ಮಕ್ಕಳನ್ನು ಕರೆತರಲಾಗುತ್ತಿದೆ ಆದರೆಕಳೆದ ಸುಮಾರು ಮೂರು ತಿಂಗಳಿಂದ ಮಕ್ಕಳ ವೈದ್ಯರಿಲ್ಲದೆ ಜನರು ತಮ್ಮ ಮಕ್ಕಳ ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು. ಇಲ್ಲಿ ಪ್ರತಿ ನಿತ್ಯ ಹೆರಿಗೆ ಆಸ್ಪತ್ರೆ ಇರುವುದರಿಂದ ನವಜಾತ ಶಿಶುಗಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೂ ಪರದಾಡುವಂತಾಗಿದೆ.
ತಾಲ್ಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ಮಕ್ಕಳ ತಜ್ಞ ಡಾ.ತಿಪ್ಪೇಸ್ವಾಮಿ ನಿವೃತ್ತಿ ನಂತರ ಒಬ್ಬ ಮಹಿಳಾ ವೈದ್ಯರನ್ನು ನೇಮಕ ಮಾಡಿದ್ದರು ಅವರು ಹೆರಿಗೆಯಾಗಿರುವುದರಿಂದ ಕರ್ತವ್ಯಕ್ಕೆ ಬರಲು ಸಾಧ್ಯವಾಗಿಲ್ಲ ಮೊತ್ತಬ್ಬ ವೈದ್ಯರನ್ನು ನೇಮ ಮಾಡಿದೆ ಅವರು ಬರಬೇಕಿದೆ ಎಂದು ತಿಳಿಸಿದರು.
ಚಿಕಿತ್ಸೆಗೆಂದು ಮಕ್ಕಳನ್ನು ಕರೆತಂದ ಪೋಷಕರೊಬ್ಬರು ಮಾತನಾಡಿ, ಮಕ್ಕಳಿಗೆ ಜ್ವರ ಬಂದಿದೆ ಆದ್ದರಿಂದ ಮಕ್ಕಳ ವೈದ್ಯರ ಬಳಿ ತೋರಿಸಲು ಬಂದಿದ್ದೆವೆ ವೈದ್ಯರ ಕೊಠಡಿ ಬೀಗ ಹಾಕಿರುವುದರಿಂದ ಯಾವ ವೈದ್ಯರ ಬಳಿ ತೋರಿಸಬೇಕು ಎಂದು ತೋಚದಂತಾಗಿದೆ ಎಂದು ಅಳಲು ತೋಡಿಕೊಂಡರು.
ಈಗಲಾದರೂ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ತುರ್ತಾಗಿ ಮಕ್ಕಳವೈದ್ಯರ ನೇಮಕ ಮಾಡುವರೇ ಕಾದು ನೋಡ ಬೇಕಿದೆ.
Kshetra Samachara
21/09/2022 07:07 pm