", "articleSection": "Infrastructure,Health & Fitness,Government", "image": { "@type": "ImageObject", "url": "https://prod.cdn.publicnext.com/s3fs-public/90235-1733937736-vvvvv98uiy.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Chidananda Chitradurga" }, "editor": { "@type": "Person", "name": "Nagesh.Gaonkar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಳ್ಳಕೆರೆ: ಲಕ್ಷ‌ ಲಕ್ಷ ಸುರಿದು ಸರಕಾರಿ ಆಸ್ಪತ್ರೆ ಕಟ್ಟಿದರೂ ಸಹ ಇಲ್ಲಿನ ಶವಾಗಾರದಲ್ಲಿ ಶೀತಲೀಕರಣ ವ್ಯವಸ್ಥೆ ಇಲ್ಲದೆ ಹೆಣಗಳನ್ನು ರಕ್ಷಿಸುವು...Read more" } ", "keywords": "Challakere, Mortuary, Freezer Facility, Charity Initiative, Social Service, Challakere Municipality, Karnataka News, Community Development.,Chitradurga,Infrastructure,Health-and-Fitness,Government", "url": "https://publicnext.com/node" } ಚಳ್ಳಕೆರೆ: "ಶವಾಗಾರಕ್ಕೆ ಶೀತಲೀಕರಣ ವ್ಯವಸ್ಥೆ ಒದಗಿಸಿ, ಪುಣ್ಯ ಕಟ್ಟಿಕೊಳ್ಳಿ"
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: "ಶವಾಗಾರಕ್ಕೆ ಶೀತಲೀಕರಣ ವ್ಯವಸ್ಥೆ ಒದಗಿಸಿ, ಪುಣ್ಯ ಕಟ್ಟಿಕೊಳ್ಳಿ"

ಚಳ್ಳಕೆರೆ: ಲಕ್ಷ‌ ಲಕ್ಷ ಸುರಿದು ಸರಕಾರಿ ಆಸ್ಪತ್ರೆ ಕಟ್ಟಿದರೂ ಸಹ ಇಲ್ಲಿನ ಶವಾಗಾರದಲ್ಲಿ ಶೀತಲೀಕರಣ ವ್ಯವಸ್ಥೆ ಇಲ್ಲದೆ ಹೆಣಗಳನ್ನು ರಕ್ಷಿಸುವುದು ದುಸ್ತರವಾಗಿದೆ.

ನಗರದಲ್ಲಿ ಬೀದರ್- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಅಪಘಾತದಲ್ಲಿ ತೀರಿಹೋಗುವ ದೂರದ ಊರು- ನಗರಗಳ ಜನರ ಮೃತದೇಹಗಳ ಸುರಕ್ಷಿತ ಸಂಗ್ರಹಣೆ ಹಾಗೂ ಆತ್ಮಹತ್ಯೆ, ಕೊಲೆಗೀಡಾದ ಅಪರಿಚಿತ ಶವಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲು ಎರಡು- ಮೂರು ದಿನ ಹಾಗೂ ಇನ್ನು ಹೆಚ್ಚಿನ ದಿನಗಳ ವರೆಗೆ ಕಾಯಬೇಕಾಗುತ್ತದೆ. ಈ ಸಮಯದಲ್ಲಿ ಇಲ್ಲಿ ಶವಗಳು ಕೊಳೆಯುವ ಸಾಧ್ಯತೆ ಇದೆ.

ನಗರದ ಸಾರ್ವಜನಿಕ‌ ಆಸ್ಪತ್ರೆಯ ಆವರಣದಲ್ಲಿರುವ ಶವಾಗಾರದಲ್ಲಿ‌ ಶೀತಲೀಕರಣ ವ್ಯವಸ್ಥೆಯಿಲ್ಲದೆ ಇರುವುದು ಶವಗಳ ರಕ್ಷಣೆ ಮಾಡಲು ಪೊಲೀಸರು ಹರಸಾಹಸ ಪಡಬೇಕಾಗಿದೆ.

Edited By : Nagesh Gaonkar
PublicNext

PublicNext

11/12/2024 10:52 pm

Cinque Terre

33.46 K

Cinque Terre

0