ಚಿತ್ರದುರ್ಗ: ಹೆರಿಗೆಗೆಂದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಗಂಡು ಮಗುವಿಗೆ ಜನ್ಮ ನೀಡಿದ ಬಾಣಂತಿ ರೋಜಮ್ಮ ಮೃತಪಟ್ಟಿದ್ದಾರೆ.
ಚಿತ್ರದುರ್ಗ ತಾಲೂಕಿನ ಜಾಗನೂರಹಟ್ಟಿ ಗ್ರಾಮದ ರೋಜಮ್ಮ (24) ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ 40 ದಿನಗಳ ಹಿಂದೆ ಅಷ್ಟೇ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಸಿಜೇರನ್ ಮೂಲಕ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ರೋಜಮ್ಮಳನ್ನ ಸಿಜೇರಿನ್ ಮಾಡಿಸಿದ್ದ ವೈದ್ಯ ಡಾ. ರೂಪಶ್ರೀ ಅವರು ರೋಜಮ್ಮನಳನ್ನ ಐದು ದಿನಗಳ ಬಳಿಕ ಊರಿಗೆ ಕಳಿಸಿದ್ದರು.
ಹೊಟ್ಟೆ ನೋವು, ಉರಿ ಅಂತ ಮಂಗಳವಾರ ರಾತ್ರಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರೋಜಮ್ಮ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲಾಸ್ಪತ್ರೆಯಲ್ಲಿ ರೋಜಮ್ಮ ಮೃತಪಟ್ಟಿದ್ದಾರೆ. ಆಸ್ಪತ್ರೆಯ ವೈದ್ಯಾಧಿಕಾರಿಗಳ ವಿರುದ್ಧ ರೋಜಮ್ಮ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿ ವೈದ್ಯರ ನಿರ್ಲಕ್ಕೆ ಬಾಣಂತಿ ಸಾವು ಆರೋಪ ಮಾಡಿದ್ದಾರೆ.
PublicNext
11/12/2024 09:35 am