ಚಳ್ಳಕೆರೆ : ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜಾನುವಾರಿಗಳಿಗೆ ಗಂಟು ರೋಗ ಮತ್ತೆ ಕಾಣಿಸಿಕೊಂಡಿದೆ , ಚಳಿಗಾಲವಾದರೂ ಒಣ ಹವೆ ವ್ಯಾಪಕಗೊಳ್ಳುತ್ತಿದ್ದಂತೆ ತಾಲ್ಲೂಕಿನಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಳ್ಳುತ್ತಿದೆ. ಕಳೆದ ವರ್ಷ ರೈತರ ನಿದ್ದೆಗೆಡಿಸಿದ ಕಾಯಿಲೆ ಇದೀಗ ಮತ್ತೆ ಆತಂಕ ಮೂಡಿಸಿದೆ.
ದೇಹದ ಬಹುತೇಕ ಭಾಗಗಳಲ್ಲಿ 1 ರಿಂದ 2 ಸೆಂ.ಮೀ ಗಾತ್ರದ ಗಂಟು ಆಗುತ್ತವೆ. ಹಸುಗಳಲ್ಲಿ ಗರ್ಭಪಾತವಾಗಬಹುದು. ಕೀಲುಗಳಲ್ಲಿ ಊತ ಮತ್ತು ಬಾವಿನೊಂದಿಗೆ ಬಳಲುತ್ತವೆ.ಮುಂಜಾಗ್ರತೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ದನಗಳಲ್ಲಿ ಸೋಂಕು ಹೆಚ್ಚಾಗಿ ಹರಡುವ ಸಾಧ್ಯತೆ ಇದೆ. ತಾಯಿ ಹಸುವಿನ ಹಾಲನ್ನುಕುಡಿದರೆ ಕರುವಿಗೂ ಸೋಂಕು ತಗಲುವ ಸಾಧ್ಯತೆ ಹೆಚ್ಚಿದೆ.
PublicNext
12/12/2024 12:42 pm