ಚಿತ್ರದುರ್ಗ: ಬೆಳೆ ಕಟಾವು ಮಾಡಿ ಕೂಡಿಟ್ಟಿದ್ದ ನಾಲ್ಕು ಲೋಡ್ ರಾಗಿ ಹಾಗೂ ಮೆಕ್ಕೆಜೋಳ ಅಗ್ನಿ ಅವಘಡದಲ್ಲಿ ಸುಟ್ಟು ಕರಕಲಾಗಿದೆ. ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿ ವ್ಯಾಪ್ತಿಯ ಸಿದ್ದವ್ವನದುರ್ಗ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಬೆಳೆ ಕಟಾವು ಮಾಡಿ ತಂದಿಟ್ಟಿದ್ದ 4 ಲೋಡ್ ರಾಗಿ ಹಾಗೂ 8 ಲೋಡ್ ಮೆಕ್ಕೆಜೋಳದ ಸೆಪ್ಪೆ ಸುಟ್ಟು ಕರಕಲಾಗಿದೆ.
ಗ್ರಾಮದ ಪರಶುರಾಮಪ್ಪ ಹಾಗೂ ಸುರೇಶ್ ಎಂಬುವವರ ರಾಗಿ ಹಾಗೂ ಮೆಕ್ಕೆಜೋಳದ ಬೆಳೆಗಳು ಬೆಂಕಿಗಾಹುತಿಯಾಗಿವೆ.
ಕೂಡಲೇ ಗ್ರಾಮಸ್ಥರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಅಗ್ನಿ ಅವಘಡದಲ್ಲಿ ಅಂದಾಜು 2 ಲಕ್ಷದಷ್ಟು ನಷ್ಟ ಉಂಟಾಗಿದೆ. ಇದು ತುರುವನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿದೆ.
PublicNext
15/12/2024 10:48 pm